ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಅಮ್ಜದ್ ಸಲಹೆ ಮಾಡಿದರು.
ನಗರದ ಐ.ಜಿ.ರಸ್ತೆಯ ಸರ್ಕಾರಿ ಉರ್ದು ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಇಕೋ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಪ್ರಕೃತಿಯ ಮಕ್ಕಳು, ನಾವು ಸದಾಕಾಲ ಪ್ರಕೃತಿಯ ಜೊತೆಗೇ ಬದುಕಬೇಕು ಅದಿಲ್ಲದಿದ್ದರೆ ನಮ್ಮ ಬದುಕೇ ಇಲ್ಲ. ಆದರೆ ಅದನ್ನು ಮರೆತಿರುವ ನಾವು ಇಂದು ಆಧುನಿಕತೆಯ ಹಿಂದೆ ಓಡುತ್ತಿದ್ದೇವೆ, ಕೈಗಾರಿಕೆಗಳು, ಪೆಟ್ರೋಲ್, ಡೀಸೆಲ್ ಮತ್ತು ಪ್ಲಾಸ್ಟಿಕ್‍ನ್ನು ಮಿತಿಮೀರಿ ಬಳಸುತ್ತಿದ್ದೇವೆ ಆ ಮೂಲಕ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಜಲ ಮಾಲಿನ್ಯವನ್ನು ಮಾಡಿದ್ದೇವೆ ಎಂದು ವಿಷಾದಿಸಿದರು.
ದುರಾಸೆ ಮತ್ತು ಸ್ವಾರ್ಥದಿಂದಾಗಿ ಕಾಡನ್ನು, ನದಿಗಳನ್ನು, ಬೆಟ್ಟಗುಡ್ಡಗಳನ್ನು ಕಡಿದು ನಾಶ ಮಾಡಿದ್ದೇವೆ, ಇದರ ಪರಿಣಾಮ ಅಕಾಲಿಕ ಮಳೆ, ಅತಿವೃಷ್ಠಿ, ಅನಾವೃಷ್ಠಿ, ಪ್ರಕೃತಿ ವಿಕೋಪಗಳು ಘಟಿಸುತ್ತಿವೆ, ಅತಿಯಾದ ಮಾಲಿನ್ಯದಿಂದಾಗಿ ಕಂಡು ಕೇಳರಿಯದ ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ ಎಂದ ಅವರು ಈಗಲಾದರೂ ನಾವು ಎಚ್ಚೆತ್ತು ಗಿಡಮರಗಳನ್ನು ನೆಟ್ಟು ಪೋಷಿಸಬೇಕು, ನೈಸರ್ಗಿಕ ಅರಣ್ಯವನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಶಾಲಾಭಿವೃದ್ದಿ ಸಮಿತಿಯ ಗೌರವಾಧ್ಯಕ್ಷ ನಸ್ರುಲ್ಲಾ ಷರೀಫ್ ಮಾತನಾಡಿ ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಎಸ್.ಎಂ.ಮಹೇಶಪ್ಪ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮತ್ತು ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಇಕೋ ಕ್ಲಬ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಜೀನತ್ ಉನ್ನೀಸ ಅಧ್ಯಕ್ಷತೆ ವಹಿಸಿದ್ದರು, ಬೈತುಲ್ ಮಾಲ್ ಸಂಸ್ಥೆಯ ಅಧ್ಯಕ್ಷ ನಜೀರ್ ಅಹಮದ್, ಮುಖ್ಯ ಶಿಕ್ಷಕಿ ಫರ್ಜಾನ ಬೇಗಂ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ದೊಡ್ಡಮಲ್ಲಪ್ಪ, ಸಂಪನ್ಮೂಲ ಅಧಿಕಾರಿ ಜಗಧೀಶ್, ಶಿಕ್ಷಕರಾದ ತಂಜೀಂ, ಲತಾ ಉಪಸ್ಥಿತಿರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು :...










