ಚಿಕ್ಕಮಗಳೂರು: ಮದ್ಯ ಸೇವಿಸಿ ಆಪರೇಷನ್ ಥಿಯೇಟರ್‌ನಲ್ಲಿ ಮಲಗಿದ್ದ ವೈದ್ಯ…

72
firstsuddi

ಚಿಕ್ಕಮಗಳೂರು: ಮದ್ಯ ಸೇವಿಸಿ ಆಪರೇಷನ್ ಥಿಯೇಟರ್‌ನಲ್ಲಿ ಮಲಗಿದ್ದ ವೈದ್ಯ ಶಸ್ತ್ರಚಿಕಿತ್ಸೆಯ ವೇಳೆ ಫುಲ್ ಟೈಟಾಗಿ ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಕ್ಯಾಂಪ್ ಏರ್ಪಾಡು ಮಾಡಿದ್ದು, ಮಹಿಳೆಯರಿಗೆ ನಿನ್ನೆ ಬೆಳಗ್ಗೆ 8 ಗಂಟೆಗೆ ಬರಲು ಹೇಳಿದ್ದರು. ಕ್ಯಾಂಪ್‌ಗೆ 10ಕ್ಕೂ ಹೆಚ್ಚು ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಬೆಳಗ್ಗೆ 8 ಗಂಟೆಗೆ ಬಂದಿದ್ದರು. ಆಪರೇಷನ್ ಮಾಡುವ ಸಲುವಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು 3 ಗಂಟೆಗೆ ಬಂದಿದ್ದ. ಬರುತ್ತಲೇ ಫುಲ್ ಟೈಟ್ ಆಗಿದ್ದ ಈತ ಸಂತಾನಹರಣ ಚಿಕಿತ್ಸೆ ಮಾಡಬೇಕಾದ ಆಪರೇಷನ್ ಬೆಡ್ ಮೇಲೆ ಮಲಗಿದ್ದಾನೆ. ಇದರಿಂದಾಗಿ ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರು ರೆಬಲ್ ಆಗಿದ್ದಾರೆ.

ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ, ಅನಸ್ತೇಷಿಯಾ ಇಂಜೆಕ್ಷನ್ ಪಡೆದಿದ್ದ 9 ಮಹಿಳೆಯರ ಪರದಾಟ ಹೇಳತೀರದು. ಇನ್ನು ಈ ಕುರಿತು ರೋಗಿಗಳ ಸಂಬಂಧಿಕರಿಂದ ಆಸ್ಪತ್ರೆಯಲ್ಲೇ ವೈದ್ಯನಿಂದ ಮಧ್ಯಪಾನ ಮಾಡಿರುವ ಆರೋಪ ಕೇಳಿಬಂದಿದೆ.

ಕಳಸ ತಾಲೂಕು ಸರ್ಕಾರಿ ವೈದ್ಯನ ವಿರುದ್ಧ ಮದ್ಯಸೇವನೆ ಆರೋಪ ಕೇಳಿಬಂದಿದ್ದು, ಇದೀಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ಅವರು ಮಾತನಾಡಿ ‘ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.