ಚಿಕ್ಕಮಗಳೂರು : ರಾಜ್ಯಕ್ಕೆ ಉತ್ತಮ ಮಳೆಯಾಗಿ ರಾಜ್ಯದ ಜನ ಬರದಿಂದ ದೂರ ಉಳಿಯುತ್ತಾರೆ : ಡಿ.ಕೆ. ಶಿವಕುಮಾರ್

232

ಚಿಕ್ಕಮಗಳೂರು : ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಪರ್ಜನ್ಯ ಜಪ ಮುಕ್ತಾಯವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಇದು ವಿಶೇಷವಾದ ಪುಣ್ಯಕ್ಷೇತ್ರ. ಋಷ್ಯಶೃಂಗೇಶ್ವರನ ಮೊರೆ ಹೋದರೆ ಸಕಾಲಕ್ಕೆ ಮಳೆ ಆಗುತ್ತದೆ ಎಂಬ ನಂಬಿಕೆ ನಮ್ಮದು. ಪೂಜೆಯಿಂದ ಈ ವರ್ಷ ರಾಜ್ಯಕ್ಕೆ ಉತ್ತಮ ಮಳೆ ಆಗುತ್ತದೆ. ರಾಜ್ಯದ ಜನರು ಬರದಿಂದ ದೂರ ಉಳಿಯುತ್ತಾರೆ. ಋಷ್ಯಶೃಂಗೇಶ್ವರ, ಶಾರದಾಂಬೆ, ಶಾಂತದೇವಿ ದೇವತೆಗಳ ಬಳಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದೇನೆ. ಸರ್ಕಾರದ ವತಿಯಿಂದ ಮಳೆಗಾಗಿ ಈ ಪೂಜೆ ನಡೆಸಲಾಗಿದೆ ಎಂದು ಹೇಳಿದರು