ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕ ವರ್ಗದ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಧಾವಿಸಬೇಕು : ಹೆಚ್.ಹೆಚ್.ದೇವರಾಜ್.

233
firstsuddi

ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕ ವರ್ಗದ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಧಾವಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಒತ್ತಾಯಿಸಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ಪಕ್ಷದ ಕಾರ್ಮಿಕ ವಿಭಾಗ ಮೇ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶವನ್ನು ಕಟ್ಟುವವರು ಕಾರ್ಮಿಕರು ಅವರೇ ರಾಷ್ಟ್ರದ ಆಧಾರ ಸ್ತಂಭಗಳು, ದುಡಿಯುವ ವರ್ಗವನ್ನು ಕಡೆಗಣಿಸಿದರೆ ಯಾವುದೇ ದೇಶ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ, ಕಾರ್ಮಿಕರ ಬದುಕು ಹಸನಾದರೆ ಮಾತ್ರ ರಾಷ್ಟ್ರ ಅಭಿವೃದ್ದಿ ಹೊಂದುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಾನು ಮಿರಾಂಡ ಕಾರ್ಮಿಕರು ದೇಶದ ಬೆನ್ನೆಲುಬು ಅವರ ಪ್ರಗತಿಯಾದರೆ ಮಾತ್ರ ರಾಷ್ಟ್ರದ ಪ್ರಗತಿಯಾಗುತ್ತದೆ ಎಂದು ಹೇಳಿದರು.
ಮೇ ದಿನದ ಅಂಗವಾಗಿ ಐವರು ಕಾರ್ಮಿಕರನ್ನು ಸಮಾರಂಭದಲ್ಲಿ ಸನ್ಮಾನಿಸಿ ಸಹಾಯ ಧನ ನೀಡಲಾಯಿತು, ಪಕ್ಷದ ಮುಖಂಡರಾದ ಜಿ.ಎಸ್.ಚಂದ್ರಪ್ಪ, ಜಮೀರ್ ಅಹಮದ್, ಭಾಷಾ, ವಿನಯ್ ರಾಜ್, ಎಂ.ಡಿ.ರಮೇಶ್ ಹಾಜರಿದ್ದರು.