ಜನಿಸಿದ 3-4 ಗಂಟೆಗಳಲ್ಲೇ ನವಜಾತ ಶಿಶು ಕೊರೊನಾಗೆ ಬಲಿ…

122
firstsuddi

ಬೆಂಗಳೂರು : ಹುಟ್ಟಿದ ಮೂರು-ನಾಲ್ಕು ಗಂಟೆಗಳಲ್ಲೇ ನವಜಾತ ಶಿಶು ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿರುವ ಮನಕಲಕುವ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ಗರ್ಭಿಣಿ ಮಹಿಳೆ ಒಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಇಂದು ಬೆಳಿಗ್ಗೆ ಹೆರಿಗೆಯಾಗಿದೆ. ಬಳಿಕ ಮಗುವಿಗೆ ಕೊರೊನಾ ಸೋಂಕು ಪರೀಕ್ಷೆಗೆ ನಡೆಸಲಾಗಿತ್ತು. ವರದಿಯಲ್ಲಿ ಮಗುವಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಆದರೆ ಜನಿಸಿದ 3-4 ಗಂಟೆಯಲ್ಲೇ ಮಗು ಕೊನೆಯುಸಿರೆಳೆದಿದ್ದು, ಮಗುವಿನ ಅಂತ್ಯಸಂಸ್ಕಾರವನ್ನು ಆಂಬುಲೆನ್ಸ್ ಸಿಬ್ಬಂದಿಯೇ ಹಿಂದೂ ಸಂಪ್ರದಾಯದ ಪ್ರಕಾರ ನೆರವೇರಿಸಿದ್ದಾರೆ.