ಜಿ.ಪಂ.ಅಧ್ಯಕ್ಷೆಯಾದ 22 ವರ್ಷದ ಇಂಜಿನಿಯರಿಂಗ್ ಪದವೀಧರೆ…

84
firstsuddi

ಚೆನ್ನೈ: ತಮಿಳುನಾಡಿನ 22 ವರ್ಷದ ಇಂಜಿನಿಯರಿಂಗ್ ಪದವೀಧರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ.

ಚಾರುಕಲಾ ತಮಿಳುನಾಡಿನ ಕಡಾಯಂ ಪಂಚಾಯತ್ ಯೂನಿಯನ್​ನ ವೆಂಕಟಂಪಟ್ಟಿ ಪಂಚಾಯತ್ ಕೌನ್ಸಿಲ್​​ನ ಅಧ್ಯಕ್ಷರಾಗಿ ಆಯ್ಕೆಯಾಗಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ವೆಂಕಟಂಪಟ್ಟಿ ಪಂಚಾಯತ್ ನ ಲಕ್ಷ್ಮಿಯೂರು ಗ್ರಾಮದವರಾದ ರವಿ ಸುಬ್ರಮಣಿಯನ್ ಮತ್ತು ಶಾಂತಿಯವರ ಪುತ್ರಿಯಾದ ಚಾರುಕಲಾ (22) ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಿ.ಟೆಕ್ ಮುಗಿಸಿರುವ ಅವರು ಈಗ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

ಈ ಕುರಿತು ಚಾರುಕಲಾ ಅವರು ಪ್ರತಿಕ್ರಿಯಿಸಿದ್ದು, ನಾನು ಈ ಗೆಲುವಿಗೆ ತುಂಬಾ ಸಂತೋಷ ಪಡುತ್ತೇನೆ. ನನ್ನನ್ನು ನಂಬಿದ ಜನರಿಗೆ ನಾನು ವಿನಮ್ರನಾಗಿದ್ದೇನೆ ಎಂದು ತಿಳಿಸಿದರು. 

ಚಾರುಕಲಾ ಅವರ ತಂದೆ ರವಿ ಸುಬ್ರಮಣಿಯನ್ ಅವರು ಕಳೆದ ಬಾರಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.