‘ಕೋಟಿಗೊಬ್ಬ 3’ ರಿಲೀಸ್ ವಿಳಂಬ – ಚಿತ್ರಮಂದಿರದ ಮೇಲೆ ಕಿಚ್ಚನ ಅಭಿಮಾನಿಗಳಿಂದ ಕಲ್ಲು ತೂರಾಟ…

85
firstsuddi

ವಿಜಯಪುರ : ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಕೋಟಿಗೊಬ್ಬ-3’ ಸಿನಿಮಾ ಬಿಡುಗಡೆಗೆ ವಿಳಂಬವಾದ ಕಾರಣ ಕಿಚ್ಚ ಸುದೀಪ್ ಅಭಿಮಾನಿಗಳು ನಗರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಸಿನಿಮಾ ಪ್ರದರ್ಶನವಾಗಬೇಕಾಗಿತ್ತು. ಆದರೆ ಚಿತ್ರ ಪ್ರದರ್ಶನ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಅಭಿಮಾನಿಗಳು ಚಿತ್ರಮಂದಿರ ಮೇಲೆ ಕಲ್ಲು ತೂರಾಟ ನಡೆಸಿ, ಥಿಯೇಟರ್ ಬಾಗಿಲು ಮುರಿಯಲು ಯತ್ನಿಸಲಾಗಿದೆ. ಥಿಯೇಟರ್ ಎದುರಿದ್ದ ಲೈಟ್ ಗಳನ್ನು ಒಡೆದು ಹಾಕಲಾಗಿದೆ. ಬೆಳಗ್ಗೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳು, ಪ್ರದರ್ಶನ ರದ್ದಾದ ನಂತರ ತಾಳ್ಮೆ ಕಳೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಇದು ಕೇವಲ ನಗರದ ಚಿತ್ರಣ ಮಾತ್ರವಲ್ಲ, ರಾಜ್ಯಾದ್ಯಂತ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.