ಶಿವಮೊಗ್ಗ : ಜೋಕಾಲಿ ಆಡುವಾಗ ಸೀರೆಯೇ ಉರುಳಾಗಿ ಬಾಲಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಿಶೋರ್ (13) ಮೃತ ಬಾಲಕ. ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ದೊಡ್ಡೇರಿ ಗ್ರಾಮದ ನಿವಾಸಿಯಾಗಿರುವ ಕಿಶೋರ್ ಹಾಡೋನಹಳ್ಳಿಯ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಮಧ್ಯಾಹ್ನ ಮನೆಯಲ್ಲಿ ಸೀರೆಯಿಂದ ಮಾಡಿಕೊಂಡಿದ್ದ ಜೋಕಾಲಿಯಲ್ಲಿ ಆಡುವಾಗ ಸೀರೆ ಮೃತ ಕಿಶೋರ್ ನ ಕುತ್ತಿಗೆಗೆ ಉರುಳಾಗಿ ಸುತ್ತಿಕೊಂಡಿದೆ. ಪರಿಣಾಮ ಬಾಲಕ ಕಿಶೋರ್ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










