ಡೆತ್‍ನೋಟ್ ಬರೆದಿಟ್ಟು ಫೈನಾನ್ಸಿಯರ್ ನೇಣಿಗೆ ಶರಣು…

44
firstsuddi

ಬೆಂಗಳೂರು : ಡೆತ್‍ನೋಟ್ ಬರೆದಿಟ್ಟು ಫೈನಾನ್ಸಿಯರ್ ಕಚೇರಿಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಘಟನೆ ಯಲಚೇನಹಳ್ಳಿಯ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ನಡೆದಿದೆ.

ರಾಜಣ್ಣ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೆ.ಪಿ.ನಗರದ 9ನೇ ಹಂತದ ಅಂಜನಾಪುರದ ನಿವಾಸಿ ರಾಜಣ್ಣ ಚೀಟಿ ವ್ಯವಹಾರ ನಡೆಸುತ್ತಿದ್ದರು. ನಿರಂಜನ್ ಎಂಬುವರಿಗೆ 8 ಲಕ್ಷ ಹಣ ಕೊಡದೆ ರಾಜಣ್ಣ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಕೆಲ ದಿನಗಳ ಹಿಂದೆ ನಿರಂಜನ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ರಾಜಣ್ಣನನ್ನು ವಿಚಾರಣೆಗೂ ಒಳಪಡಿಸಿದ್ದರು.

ಈ ಮಧ್ಯೆ ಗುಣ ಹಾಗೂ ಮಂಜುನಾಥ್ ಎಂಬುವರು ತಮಗೂ ಬಾಕಿ ಹಣ ನೀಡಬೇಕೆಂದು ಒತ್ತಾಯಿಸಿ ಸಿಸಿಬಿ ಪೊಲೀಸರ ಮೊರೆ ಹೋಗಿದ್ದರು.ಆದರೆ ನಿರಂಜನ್ ಗೆ ಮಾತ್ರ ಹಣ ಕೊಡಬೇಕಾಗಿತ್ತು. ಕಳೆದೊಂದು ವಾರದಿಂದ ಹಣ ನೀಡುವಂತೆ ಒತ್ತಡ ಹೇರಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.