ಡೇಟಿಂಗ್ ಆ್ಯಪ್‍ನಲ್ಲಿ ಪರಿಚಯವಾದ ಚೆಲುವೆಯ ಮೋಹಕ್ಕೆ ಬಿದ್ದು 6 ಕೋಟಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್.!

65
firstsuddi

ಬೆಂಗಳೂರು : ಬ್ಯಾಂಕ್ ಮ್ಯಾನೇಜರ್​ವೊಬ್ಬರು ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಯ ಮೋಹಕ್ಕೆ ಬಿದ್ದು 6 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

ಹನುಮಂತನಗರ ಇಂಡಿಯನ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿರುವ ಹರಿಶಂಕರ್ ಡೇಟಿಂಗ್ ಆ್ಯಪ್ ನಲ್ಲಿ ಯುವತಿಯೊಬ್ಬಳ ಪರಿಚಯ ಮಾಡಿಕೊಂಡಿದ್ದಾರೆ. ಯುವತಿ ಸಹ ರಸಭರಿತವಾಗಿ ಹರಿಶಂಕರನ ಮೊಬೈಲ್ ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಳು. ಚೆಲುವೆಯ ಮೆಸೇಜ್ ಗೆ ಮನಸೋತು ತನ್ನ ಬಳಿಯಿದ್ದ 12 ಲಕ್ಷ ಹಣವನ್ನು ಯುವತಿಯ ಅಕೌಂಟ್ ಗೆ ಕಳುಹಿಸಿದ್ದ.

ಯುವತಿ ನನಗೆ ಇನ್ನೂ ಹಣಬೇಕು, ಅದೆಷ್ಟು ಪ್ರೀತಿಬೇಕು ಕೇಳು ಅಂದಿದ್ದಾಳಂತೆ. ಅಷ್ಟಕ್ಕೆ ಆತ ತಾನು ಕೆಲಸ ಮಾಡ್ತಿದ್ದ ಇಂಡಿಯನ್ ಬ್ಯಾಂಕ್ ನ ಠೇವಣಿದಾರರಾದ ಅನಿತಾ ಎಂಬವರ ಎಫ್ ಡಿ ಖಾತೆಯ ಮೇಲೆ ಸರಿಸುಮಾರು 6 ಕೋಟಿಯಷ್ಟು ಲೋನನ್ನ ಮಾಡಿ ಡೇಟಿಂಗ್ ಬೆಡಗಿಗೆ ನೀಡಿದ್ದಾನೆ. ಇದೀಗ ಹರಿಶಂಕರ್ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.