ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ.

45

ವೆಸ್ಟ್ ಫಾಮ್ ಬೀಚ್ (ಫ್ಲೋರಿಡಾ): ಆಮೆರಿಕಾ ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕ್ ಪಕ್ಷದಿಂದ ಎರಡನೇ ಬಾರಿ ಮತ್ತೊಂದು ಹತ್ಯೆ ಯತ್ನ ನಡೆದಿದೆ ಪ್ಲೋರಿಡಾದ ಗಾಲ್ಫ್ ಕ್ಲಬ್‍ನಲ್ಲಿದ್ದ ಟ್ರಂಪ್ ಅವರತ್ತ ಗುಂಡಿನ ದಾಳಿ ನಡೆಸಲಾಗಿದ್ದು, ಅವರು ಜೀವಾಪಾಯದಿಂದ ಪಾರಾಗಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ. ಮಾಜಿ ಅಧ್ಯಕ್ಷರು ಆರೋಗ್ಯವಾಗಿದ್ದಾರೆ. ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ರಂಪ್ ಅವರು ಪ್ಲೋರಿಡಾದ ತಮ್ಮ ಗಾಲ್ಫ್ ಕ್ಲಬ್ನಲ್ಲಿ (ಸೆ.18 ರಂದು) ಆಡುತ್ತಿದ್ದ ವೇಳೆ 400 ಗಜ ದೂರದಿಂದ AK ಶೈಲಿಯ ಬಂದೂಕಿನಿಂದ ದಾಳಿಕೋರ ಗುಂಡು ಹಾರಿಸಿದ್ದಾನೆ. ತಕ್ಷಣವೆ ಭದ್ರತಾ ಸಿಬ್ಬಂದಿಯೂ ಗುಂಡು ಹಾರಿಸಿದ್ದು ದಾಳಿಕೋರ ಗನ್, ಎರಡು ಬ್ಯಾಕ್ ಪ್ಯಾಕ್, ಗುರಿ ಇಡಲು ಬಳಸಿದ ಸ್ಕೋಪ್ ಮತ್ತು ಗೋಪ್ರೊ ಕ್ಯಾಮೆರಾಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾನೆ. ಬಳಿಕ ಕಾರ್ಯಾಚರಣೆ ನಡೆಸಿ ಪಕ್ಕದ ಪ್ರದೇಶದಲ್ಲಿ ಆತನನ್ನು ಬಂಧಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಎರಡು ತಿಂಗಳ ಹಿಂದೆ ನಡೆದ ದಾಳಿ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದೆ. ಟ್ರಂಪ್ ಆಟ ಆಡಲು ಬಂದಿದ್ದಾಗ ಪ್ಲೋರಿಡಾದ ಗಾಲ್ಫ್ ಕೋರ್ಸ್ ಭಾಗಶಃ ಬಂದ್ ಮಾಡಲಾಗಿರುತ್ತದೆ. ಆದರೆ ಕೆಲ ಕಡೆಗಳಲ್ಲಿ ಗಾಲ್ಫ್ ಕೋರ್ಸ್‍ನ ಗಡಿಯಲ್ಲಿ ನಿಂತು ಒಳಗಿಡುವ ಆಟಗಾರರನ್ನು ವೀಕ್ಷಿಸಬಹುದು. ಇನ್ಮುಂದೆ ಇನ್ನಷ್ಟು ಭದ್ರತೆ ಹೆಚ್ಚಿಸಲಾಗುವುದು ಎಂದು ಪಾಮ್ ಬೀಚ್ ಭದ್ರತಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಟ್ರಂಪ್:-ನನ್ನ ಸಮೀಪದಲ್ಲಿ ಗುಂಡಿನ ದಾಳಿಗಳು ನಡೆದಿವೆ. ಆದರೆ ವದಂತಿಗಳಿವೆ ಕಿವಿಗೊಡುವ ಮುನ್ನ ನಿಮಗೆ ಹೇಳ ಬಯಸುವುದೇನೆಂದರೆ ನಾನು ಸುರಕ್ಷಿತವಾಗಿದ್ದೇನೆ. ಯಾವುದೂ ನನ್ನನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಎಂದಿಗೂ ನಾನು ಶರಣಾಗುವುದಿಲ್ಲ’! ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.