ತಮಿಳುನಾಡು ರಾಜ್ಯಪಾಲರನ್ನ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಮನವಿ…

121
firstsuddi

ಚೆನ್ನೈ : ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಡಳಿತರೂಢ ಪಕ್ಷ ಡಿಎಂಕೆ ಮನವಿ ಸಲ್ಲಿಸಿದೆ.

ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಿಸಲು, ರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳುತ್ತೇನೆ ಎಂದು ಅನುಚ್ಛೇದ 159ರ ಅಡಿಯಲ್ಲಿ ಅವರು ತೆಗೆದುಕೊಂಡ ಪ್ರತಿಜ್ಞೆಯನ್ನು ರಾಜ್ಯಪಾಲ ಆರ್.ಎನ್.ರವಿ ಉಲ್ಲಂಘಿಸಿದ್ದಾರೆ. ಅಸೆಂಬ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಮ್ಮತಿ ನೀಡಲು ಅವರು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಡಿಎಂಕೆ ಆರೋಪಿಸಿದೆ.

ರಾಜ್ಯದಲ್ಲಿ ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಆರ್.ಎನ್. ರವಿ ಅವರು ಸಾಂವಿಧಾನಿಕ ಕಚೇರಿಗೆ ಅನರ್ಹರು, ಅವರನ್ನು ಕೂಡಲೇ ವಜಾಗೊಳಿಸಿ ಎಂದು ಡಿಎಂಕೆ ಆಗ್ರಹಿಸಿದೆ.