ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷ ಜೋಡಿ..!

136
firstsuddi

ಧಾರಾವಾಡ : ಜಿಲ್ಲೆಯಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಮಾತು ಬಾರದ, ಕಿವಿ ಕೇಳದ ವಿಶೇಷ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಲ್ಲೆಯ ಸತ್ತೂರ ಗ್ರಾಮದ ಕೇರಿ ಓಣಿ ಸತ್ತೂರಿನ ಕುಮಾರ ಎಂಬುವವರು ಅದೇ ಜಿಲ್ಲೆಯ ಸಾರಸ್ವತಪುರದ ಶ್ವೇತಾ ಎಂಬಾಕೆಯನ್ನು ವರಿಸಿದ್ದಾರೆ.

ಸತ್ತೂರಿನ ಕುಮಾರನಿಗೆ ಬಾಲ್ಯದಿಂದಲೂ ಕಿವಿಯೂ ಕೇಳದು, ಮಾತು ಸಹ ಬರುವುದಿಲ್ಲ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕುಮಾರನಿಗೆ ಇವನಂತೆಯೇ ಇರುವ ಹುಡುಗಿಯನ್ನು ಹುಡುಕುತ್ತಾ ಇದ್ದರು. ಆಗ ಸಾರಸ್ವತಪುರದ ಶ್ವೇತಾಳನ್ನು ನೋಡಿಯೂ ಬಂದಿದ್ದರು. ಕುಮಾರ ಕೂಡಾ ಇಷ್ಟಪಟ್ಟಿದ್ದನು. ಶ್ವೇತಾ ಮನೆಯಲ್ಲೇ ಇದ್ದು, ಕಸೂತಿ ಕಲೆಯ ಕೆಲಸ ಮಾಡಬಲ್ಲವಳಾಗಿದ್ದಾಳೆ.

ಗುರುಹಿರಿಯರೆಲ್ಲ ಒಂದು ತಿಂಗಳ ಹಿಂದೆಯೇ ಮದುವೆ ನಿಶ್ಚಯ ಮಾಡಿಕೊಂಡಿದ್ದರು. ಇದೀಗ 40 ಜನರ ಮಿತಿಯೊಳಗೆ ಕೊರೊನಾ ನಿಯಮ ಪಾಲಿಸಿ ಮದುವೆ ಮಾಡಿಕೊಂಡಿದ್ದಾರೆ. ಮದವೆಯಲ್ಲಿ ಮಾಸ್ಕ್ ಬದಲಾಯಿಸಿಕೊಂಡಿರುವುದು ವಿಶೇಷವಾಗಿದೆ.