ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಚಾಕುವಿನಿಂದ ಇರಿದ ಪತಿ…

59
firstsuddi

ಹಾಸನ: ದೂರು ಕೊಟ್ಟ ತನ್ನ ಪತ್ನಿಗೆ ವ್ಯಕ್ತಿಯೊಬ್ಬ ಠಾಣೆಯಲ್ಲೇ ಚಾಕುವಿನಿಂದ ಇರಿದಿರುವ ಘಟನೆ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಗಾಯಾಳು ಪತ್ನಿಯನ್ನು ಶಿಲ್ಪಾ ಎಂದು ಗುರುತಿಸಲಾಗಿದ್ದು, ಈಕೆಯ ಕೊಲೆಗೆ ಪತಿ ಹರೀಶ್ ಯತ್ನಿಸಿದ್ದಾನೆ. ಹರೀಶ್ ಮತ್ತು ಶಿಲ್ಪಾ ಮದುವೆಯಾಗಿ 6 ವರ್ಷಗಳಾಗಿದ್ದು, ಒಬ್ಬರ ಮೇಲೆ ಒಬ್ಬರು ಅನುಮಾನಪಟ್ಟು ಜಗಳವಾಡಿ ಠಾಣೆಯ ಮೆಟ್ಟಿಲೇರಿದ್ದಾರೆ. ಗಂಡ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಶಿಲ್ಪಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಪತಿ ಹರೀಶ್​ನನ್ನು ಕರೆಸಿ ವಿಚಾರಣೆ ನಡೆಸುತ್ತಿರುವಾಗ, ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ. ಚಾಕು ಕಿತ್ತುಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.