ಬೆಂಗಳೂರು : ಲಾಕ್ಡೌನ್ ಬಳಿಕ ಇಂದಿನಿಂದ ವಿಮಾನಯಾನ ಆರಂಭವಾಗಿದ್ದು, ಇಂದು ದೆಹಲಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ 5 ವರ್ಷದ ಬಾಲಕ ಒಬ್ಬನೇ ಪ್ರಯಾಣ ಮಾಡಿದ್ದಾನೆ. ವಿವಾಂತ್ ಶರ್ಮ ದೆಹಲಿಯಿಂದ ಒಬ್ಬನೇ ವಿಮಾನದಲ್ಲಿ ಪ್ರಯಾಣ ಮಾಡಿದ ಬಾಲಕನಾಗಿದ್ದು, ವಿವಾಂತ್ ಶರ್ಮಾ ಲಾಕ್ಡೌನ್ ಆಗುವುದಕ್ಕೂ ಮೊದಲೇ ದೆಹಲಿಯಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದು, ಬಳಿಕ ಲಾಕ್ಡೌನ್ ನಿಂದಾಗಿ 3 ತಿಂಗಳಿನಿಂದ ಅಲ್ಲಿಯೇ ಇರಬೇಕಾಯಿತು. ಲಾಕ್ಡೌನ್ ಬಳಿಕ ಇಂದಿನಿಂದ ವಿಮಾನಯಾನ ಆರಂಭವಾಗುತ್ತಿದ್ದಂತೆ ದೆಹಲಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಬಾಲಕ ಒಬ್ಬನೇ ಬಂದು ಬೆಂಗಳೂರಿನಲ್ಲಿ ಇರುವ ತನ್ನ ಪೋಷಕರನ್ನು ಸೇರಿದ್ದಾನೆ.










