ದೇವಸ್ಥಾನದಲ್ಲಿ ಬೆತ್ತಲಾಗಿ ಪುಂಡಾಟ ಮೆರೆದ ಮಾನಸಿಕ ಅಸ್ವಸ್ಥ…

82
firstsuddi

ತುಮಕೂರು : ಜಿಲ್ಲೆಯ ತಿಪಟೂರಿನ ಸುಪ್ರಸಿದ್ಧ ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಬೆತ್ತಲಾಗಿ ಸಿಕ್ಕ ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಪುಂಡಾಟ ಮೆರೆದಿದ್ದಾನೆ.

ಪುಂಡಾಟ ನಡೆಸಿದ ಮಾನಸಿಕ ಅಸ್ವಸ್ಥನನ್ನು ಹತ್ಯಾಳು ದೇವೇಗೌಡ ಎಂದು ಗುರುತಿಸಲಾಗಿದೆ. ರಾತ್ರಿ ಈತ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ದೇವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿದ್ದ ನೀರು ತುಂಬಿಸುವ ಪಾತ್ರೆಗಳನ್ನು ಹಾಗೂ ಕುರ್ಚಿಗಳನ್ನು ಎಸೆದು ಪುಡಿ ಮಾಡಿದ್ದಾನೆ. ಅಲ್ಲದೆ, ಅಂಗಡಿಯಲ್ಲಿನ ಹೂವಿನ ಹಾರಗಳನ್ನ ಕೊರಳಿಗೆ ಹಾಕಿಕೊಂಡು ಹುಚ್ಚಾಟ ನಡೆಸಿದ್ದಾನೆ.

ಪುಂಡಾಟ ನಡೆಸುತ್ತಿದ್ದ ವ್ಯಕ್ತಿ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿಬ್ಬನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.