ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ – 65,233 ವಿದ್ಯಾರ್ಥಿಗಳು ಉತ್ತೀರ್ಣ…

87
firstsuddi

ಬೆಂಗಳೂರು : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.

ಆ.12ರಿಂದ ಆ.25ರವರೆಗೆ ಪೂರಕ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ ಒಟ್ಟು 1,75,905 ವಿದ್ಯಾರ್ಥಿಗಳು ಹಾಜರಾಗಿದ್ದರು. ಪೂರಕ ಪರೀಕ್ಷೆಯಲ್ಲಿ 65,233 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 9,510 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಒಟ್ಟು 37.08% ರಷ್ಟು ಶೇಕಡವಾರು ಫಲಿತಾಂಶ ಪ್ರಕಟವಾಗಿದೆ.

http://karresults.nic.in  ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗುತ್ತಿದೆ.