ನಂದಿನಿ ಹಾಲು, ಮೊಸರಿನ ದರ 2 ರೂ. ಹೆಚ್ಚಳ…

64
firstsuddi

ಬೆಂಗಳೂರು : ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೆಎಂಎಫ್‌ ನಂದಿನಿ ಹಾಲು, ಮೊಸರಿನ ದರದಲ್ಲಿ 2 ರೂ. ಏರಿಕೆ ಮಾಡಿದ್ದು, ನಾಳೆಯಿಂದ ಅನ್ವಯವಾಗಲಿದೆ ಎಂದು ತಿಳಿಸಿದೆ. 

ಕೆಎಂಎಫ್ ಸಭೆ ಮುಕ್ತಾಯದ ಬಳಿಕ ಇಂದು ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಹಾಲು, ಮೊಸರಿನ ದರ ಏರಿಕೆಯ ಕುರಿತು ತಿಳಿಸಿದ್ದಾರೆ. ಟೋನ್ಡ್ ಹಾಲಿನ ದರ 37 ರಿಂದ 39 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಸ್ಪೆಷಲ್ ಹಾಲಿನ ದರ 43 ರಿಂದ 45 ರೂ.ಗೆ, ಸಮೃದ್ಧಿ ಹಾಲಿನ ದರ 48 ರಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಹೋಮೋಜಿನೈಸ್ಡ್ ಹಾಲು 38 ರೂ. ರಿಂದ 40 ರೂ.ಗೆ, ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ. ರಿಂದ 44 ರೂ.ಗೆ, ಶುಭಂ ಹಾಲು 43 ರೂ. ರಿಂದ 45 ರೂ.ಗೆ, ಸಂತೃಪ್ತಿ ಹಾಲು 50 ರೂ. ರಿಂದ 52 ರೂ.ಗೆ, ಡಬಲ್ ಟೋನ್ಡ್ ಹಾಲು 36 ರೂ. ರಿಂದ 38 ರೂ.ಗೆ ಏರಿಕೆಯಾಗಲಿದೆ. ಇನ್ನು ಮೊಸರಿನ ದರ ಲೀಟರ್ ಗೆ 45 ರಿಂದ 47 ರೂ. ಆಗಲಿದೆ.