ನನ್ನನ್ನ ಮಂತ್ರಿ ಮಾಡುವ ಅವಶ್ಯಕತೆ ಇಲ್ಲ : ಈಶ್ವರಪ್ಪ

79
firstsuddi

ಬೆಂಗಳೂರು : ನನಗೆ ಸಚಿವ ಸ್ಥಾನ ಬೇಡ, ನನ್ನನ್ನು ಮಂತ್ರಿ ಮಾಡುವ ಅವಶ್ಯಕತೆಯೂ ಇಲ್ಲ. ಇದನ್ನು ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಂತಾ ಕನಸು ಬಿದ್ದಿತ್ತಾ? ಅವರು ಮಲಗಿದ್ದು ಒಂದು ಕಡೆ. ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆದ್ರೂ ನನಗೆ ಕ್ಲಿನ್ ಚಿಟ್ ಸಿಕ್ಕಿದೆ. ಬಳಿಕ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೆ. ಸಿಎಂ ಮಂತ್ರಿ ಮಾಡ್ತೀನಿ ಅಂತಾ ಭರವಸೆ ನೀಡಿದ್ರು. ಆದ್ರೆ ಈಗ ಅವರಿಗೆ ಏನೇನು ಸಮಸ್ಯೆ ಇದೆಯೋ ಅನ್ನೋದು ಗೊತ್ತಿಲ್ಲ. ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡಲು ನಾನು ತಯಾರಿಲ್ಲ. ನಾನೀಗಾಗಲೇ ಅನೇಕ ಇಲಾಖೆಗಳನ್ನು ನೋಡಿದ್ದೇನೆ. ಹಾಗಾಗಿ ನನಗೆ ಸಚಿವ ಸ್ಥಾನ ಬೇಡ ಎಂದು ಸಿಎಂಗೆ ಹೇಳಿ ಬಂದಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಸಿಡಿ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಬಿಐ ತನಿಖೆ ನಡೆಸಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯ ಮಾಡಿದ್ದಾರೆ. ಸತ್ಯಾಂಶ ಏನಿದೆ ಅನ್ನೋದು ತನಿಖೆಯಿಂದಲೇ ಹೊರಬರಬೇಕು. ಇದು ಕರ್ನಾಟಕದ ರಾಜಕೀಯಕ್ಕೆ ಕಳಂಕವಾಗಿದೆ. ಮತ್ತೆ ಮತ್ತೆ ಇವರ ಮೇಲೆ ಅವರು, ಅವರ ಮೇಲೆ ಇವರು ಹೇಳುತ್ತಾ ಇರುವುದು ಸೂಕ್ತ ಅಲ್ಲ. ಇದನ್ನು ಒಮ್ಮೆ ಮುಗಿಸಿಬಿಡಲಿ. ರಮೇಶ್ ಜಾರಕಿಹೊಳಿ ಅಪೇಕ್ಷೆಪಟ್ಟಿರುವುದರಿಂದ ಸಿಬಿಐ ತನಿಖೆ ಮಾಡುವುದು ತಪ್ಪಲ್ಲ ಎಂದರು.