ನನ್ನ ಹತ್ಯೆಗೂ ಸಂಚು ರೂಪಿಸಿದ್ದರು; ಮಾಜಿ ಪ್ರಧಾನಿ ಶೇಖ್ ಹಸೀನಾ.

32

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಕಳೆದ ಆಗಸ್ಟ್‍ನಲ್ಲಿ ದೇಶದಿಂದ ಪಲಾಯನ ಮಾಡುವಾಗ ತಾವು ಮತ್ತು ತಮ್ಮ ಸಹೋದರಿ ರೆಹಾನಾ ಅವರು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಕುರಿತು ಮಾತನಾಡಿರುವ ಆಡಿಯೋವನ್ನು ಅವರ ಅವಾಮಿ ಲೀಗ್ ಪಕ್ಷ ಆನ್‍ಲೈನ್‍ನಲ್ಲಿ ಹಂಚಿಕೊಂಡಿದೆ. ರೆಕಾಡಿರ್ಂಗ್‍ನಲ್ಲಿ, 77 ವರ್ಷದ ನಾಯಕಿ ತನ್ನ ಜೀವ ಉಳಿಸಿದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ತನ್ನ ರಾಜಕೀಯ ವಿರೋಧಿಗಳು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ. ರೆಹಾನಾ ಮತ್ತು ನಾನು ಬದುಕುಳಿದೆವು. ಅದು ಕೇವಲ 20-25 ನಿಮಿಷಗಳ ಅಂತರದಲ್ಲಿ, ನಾವು ಸಾವಿನಿಂದ ಪಾರಾಗಿದ್ದೇವೆ, ಕಳೆದ ವರ್ಷ ನಡೆದ ಕೊಲೆ ಪ್ರಯತ್ನವು ನನ್ನ ವಿರುದ್ಧ ನಡೆದ ಮೊದಲ ಪಿತೂರಿಯಲ್ಲ. ತಮ್ಮ ಜೀವನದುದ್ದಕ್ಕೂ ಹಲವಾರು ಇಂತಹ ಕೊಲೆ ಪ್ರಯತ್ನಗಳು ನಡೆದಿವೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೂರಿದ್ದಾರೆ.