ನವಜಾತ ಗಂಡು ಮಗುವನ್ನು ಗದ್ದೆಯಲ್ಲಿ ಬಿಸಾಡಿ ಹೋದ ಕ್ರೂರಿ ತಾಯಿ…

210
firstsuddi

ರಾಯಚೂರು : ಕ್ರೂರಿ ತಾಯಿಯೊಬ್ಬಳು ತನ್ನ ನವಜಾತ ಗಂಡು ಶಿಶುವನ್ನು ಗದ್ದೆಯಲ್ಲಿ ಬಿಸಾಡಿ ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹರ್ವಾಪುರ ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು. ನವಜಾತ ಗಂಡು ಮಗುವನ್ನು ರಕ್ಷಿಸಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಗದ್ದೆಯಲ್ಲಿ ಮಗುವನ್ನು ಬಿಸಾಡಿ ಹೋದ ತಾಯಿಯ ಈ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.