ತುಮಕೂರು: ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆಯೊಂದು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹಟ್ಟಿಯಲ್ಲಿ ನಡೆದಿದೆ.
ಮುನಿಯಪ್ಪ ಮತ್ತು ಕರಿಯಮ್ಮ ಎಂಬುವರಿಗೆ ಸೇರಿದ ರೈತರ ಹಸುವೊಂದು ಮೂರು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚೇಳೂರು ಪಶು ವೈದ್ಯಾಧಿಕಾರಿ ಡಾ. ಶಂಕರಪ್ಪ ತಪಾಸಣೆ ನಡೆಸಿ, ಒಂದು ಗಂಡು ಕರು ಹುಟ್ಟಿದ ತಕ್ಷಣ ಮೃತಪಟ್ಟಿದೆ. ಮೂರು ಕರುಗಳು ಆರೋಗ್ಯವಾಗಿವೆ ಎಂದು ತಿಳಿಸಿದರು.
ಕರುಗಳ ಜನನದಿಂದ ರೈತ ಮುನಿಯಪ್ಪ ಮನೆಯಲ್ಲಿ ಸಂತಸ ನೆಲೆಯಾಗಿದೆ.










