ನಾಳೆ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ.

58
firstsuddi

ನವದೆಹಲಿ : ನಾಳೆ ಉತ್ತರಪ್ರದೇಶದ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಉದ್ಘಾಟನೆಯ ಬಳಿಕ ಮೊದಲ ವಿಮಾನವು ಕೊಲಂಬೊದಿಂದ ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳು ಮತ್ತು ಗಣ್ಯರ ನಿಯೋಗ ಇರಲಿದೆ.

ಭಗವಾನ್ ಬುದ್ಧ ಕೊನೆಯುಸಿರೆಳೆದಿದ್ದು ಉತ್ತರಪ್ರದೇಶದ ಕುಶಿನಗರದಲ್ಲಿ. ಇದನ್ನು ಬುದ್ಧನ ಮಹಾಪರಿನಿರ್ವಾಣದ ಸ್ಥಳ ಎಂದು ಹೇಳಲಾಗಿದ್ದು, ಇಲ್ಲೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು, ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಸುಮಾರು 3600 ಚದರ್ ಮೀಟರ್ ವಿಸ್ತಾರದಲ್ಲಿ ಹೊಸ ಟರ್ಮಿನಲ್ ಕಟ್ಟಡ ಕಟ್ಟಲಾಗಿದೆ. ಇದಕ್ಕೆ ಅಂದಾಜು 260 ಕೋಟಿ ರೂಪಾಯಿ ತಗುಲಿದೆ.

ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸಕ್ತ ವಾರದಿಂದ ಕಾರ್ಯಾಚರಣೆ ನಡೆಸಲಿದ್ದು, ಅಂತಾರಾಷ್ಟ್ರೀಯ ಬೌದ್ಧ ಯಾತ್ರಿಕರಿಗೆ ವಾಯುಯಾನವನ್ನು ಸುಲಭಗೊಳಿಸಲಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ.