ನೀಟ್ ಯುಜಿ ಫಲಿತಾಂಶ ಪ್ರಕಟ – ಮೂರನೇ ಸ್ಥಾನ ಗಳಿಸಿದ ಕರ್ನಾಟಕದ ಹೃಷಿಕೇಶ್.

62
firstsuddi

ನವದೆಹಲಿ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET UG-2022) ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ನೀಟ್ ಪರೀಕ್ಷೆಯಲ್ಲಿ ರಾಜಸ್ಥಾನದ ತನಿಷ್ಕಾ ಮೊದಲ ಸ್ಥಾನ ಪಡೆದಿದ್ದಾರೆ.

ಎರಡನೇ ಸ್ಥಾನದಲ್ಲಿ ದೆಹಲಿಯ ವತ್ಸ ಆಶಿಶ್ ಬಾತ್ರಾ, ಕರ್ನಾಟಕದ ಹೃಷಿಕೇಶ್ ನಾಗಭೂಷಣ್ ಗಂಗೂಲೆ ಮೂರನೇ ಸ್ಥಾನ ಪಡೆದಿದ್ದಾರೆ. ಯುವತಿಯರಲ್ಲಿ ಕರ್ನಾಟಕದ ರುಚ ಪಾಶ್ವೆ ಮತ್ತು ಶುಭ ಕೌಶಿಕ್ ಕೂಡ ಟಾಪರ್ ಸ್ಥಾನದಲ್ಲಿ ಹೊರ ಹೊಮ್ಮಿದ್ದಾರೆ.

ಅಭ್ಯರ್ಥಿಗಳು ನೀಟ್ ಫಲಿತಾಂಶವನ್ನು ಎನ್ ಟಿಎ ಅಧಿಕೃತದ ವೆಬ್ ಸೈಟ್  ntaneet.nic.in ನಲ್ಲಿ ಪಡೆಯಬಹುದಾಗಿದೆ.

ಜುಲೈ 17ರಂದು ದೇಶದ 546 ನಗರಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಸರಿಸುಮಾರು 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.