ನೂತನ ಸಚಿವರ ಪಟ್ಟಿ ಬಿಡುಗಡೆ – ಮಧ್ಯಾಹ್ನ 2:15ಕ್ಕೆ ಪ್ರಮಾಣ ವಚನ…

108
firstsuddi

ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಇಂದು ಮಾಧ್ಯಾಹ್ನ 2:15ಕ್ಕೆ 29 ನೂತನ ಶಾಸಕರು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಬಾರಿ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಗೆ ಬಿಜೆಪಿ ಹೈಕಮಾಂಡ್ ಮುಂದಾಗಿಲ್ಲ. 8 ಲಿಂಗಾಯತ, 7 ಒಕ್ಕಲಿಗ, 7 ಒಬಿಸಿ, 3 ದಲಿತ, 3 ಎಸ್.ಸಿ., 1 ಎಸ್.ಟಿ ಮತ್ತು ಮಹಿಳೆ ಶಾಸಕಿಗೂ ಸ್ಥಾನ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ನೂತನ ಶಾಸಕರ ಪಟ್ಟಿ ಇಲ್ಲಿದೆ :
1. ಕೆ.ಎಸ್.ಈಶ್ವರಪ್ಪ –ಶಿವಮೊಗ್ಗ
2. ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
3. ಆರ್.ಅಶೋಕ್- ಪದ್ಮನಾಭ ನಗರ
4. ಎಸ್.ಟಿ.ಸೋಮಶೇಖರ್- ಯಶವಂತಪುರ
5. ಉಮೇಶ್ ಕತ್ತಿ- ಹುಕ್ಕೇರಿ
6. ಬೈರತಿ ಬಸವರಾಜ – ಕೆ ಆರ್ ಪುರಂ
7. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
8. ಮುರುಗೇಶ್ ನಿರಾಣಿ – ಬೀಳಗಿ
9. ಕೆಸಿ ನಾರಾಯಣಗೌಡ – ಕೆಆರ್ ಪೇಟೆ
10. ಶಿವರಾಂ ಹೆಬ್ಬಾರ್- ಯಲ್ಲಾಪುರ
11. ಅರಗ ಜ್ಞಾನೇಂದ್ರ – ತೀರ್ಥಹಳ್ಳಿ
12. ಗೋವಿಂದ ಕಾರಜೋಳ-ಮುಧೋಳ
13. ಸುನೀಲ್ ಕುಮಾರ್ – ಕಾರ್ಕಳ
14. ಶಶಿಕಲಾ ಜೊಲ್ಲೆ- ನಿಪ್ಪಾಣಿ
15. ಮುನಿರತ್ನ- ಆರ್ ಆರ್ ನಗರ
16. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
17. ಎಂ.ಟಿ.ಬಿ ನಾಗರಾಜ್ – ಎಂಎಲ್ ಸಿ
18. ಹಾಲಪ್ಪ ಆಚಾರ್ – ಯಲ್ಬುರ್ಗ
19. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
20. ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
21. ಕೋಟಾ ಶ್ರೀನಿವಾಸ ಪೂಜಾರಿ – ಎಂಎಲ್ ಸಿ
22. ಪ್ರಭು ಚೌವ್ಹಾಣ್ – ಔರಾದ್
23. ವಿ ಸೋಮಣ್ಣ – ಗೋವಿಂದ್ ರಾಜನಗರ
24. ಎಸ್ ಅಂಗಾರ-ಸುಳ್ಯ
25. ಸಿ.ಸಿ.ಪಾಟೀಲ್ – ನರಗುಂದ
26. ಆನಂದ್ ಸಿಂಗ್ – ಹೊಸಪೇಟೆ
27. ಬಿ.ಸಿ.ಪಾಟೀಲ್ – ಹಿರೇಕೆರೂರು
28. ಬಿ.ಸಿ.ನಾಗೇಶ್ – ತಿಪಟೂರು
29. ಬಿ.ಶ್ರೀ ರಾಮುಲು- ಮೊಳಕಾಲ್ಮೂರು