ನೇಣು ಬಿಗಿದುಕೊಂಡು ತಾಯಿ, ಮಗ, ಸೊಸೆ ಆತ್ಮಹತ್ಯೆ…

55
firstsuddi

ಹಾವೇರಿ : ಒಂದೇ ಮನೆಯಲ್ಲಿ ತಾಯಿ ಮತ್ತು ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ.

ಭಾರತಿ ಕಮಡೊಳ್ಳಿ (40), ಸೌಜನ್ಯ ಕಮಡೊಳ್ಳಿ (20) ಹಾಗೂ ಕಿರಣ ಕಮಡೊಳ್ಳಿ (22) ಮೃತರು. ಮೂರು ತಿಂಗಳ ಹಿಂದಷ್ಟೇ ಸೌಜನ್ಯ ಮತ್ತು ಕಿರಣನ ಮದುವೆಯಾಗಿತ್ತು.

ಮೃತ ಭಾರತಿ ಅವರ ಕಿರಿಯ ಪುತ್ರ ಅರುಣ (21) ಕಳೆದ ಕೆಲವು ದಿನಗಳಿಂದ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಳೆದ ಐದಾರು ದಿನಗಳಿಂದ ಅರುಣನ ಜೊತೆ ಯುವತಿಯೂ ನಾಪತ್ತೆಯಾಗಿದ್ದಳು. ಇದರಿಂದ ಯುವತಿ ಮನೆಯವರು ತಮ್ಮ ಮಗಳನ್ನು ಕರೆತರುವಂತೆ ಅರುಣನ ತಾಯಿ ಭಾರತಿ, ಹಿರಿಯ ಮಗ ಕಿರಣ ಮತ್ತು ಕಿರಣನ ಪತ್ನಿ ಸೌಜನ್ಯಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು.

ಯುವತಿ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಮೂವರೂ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹಾವೇರಿ ಗ್ರಾಮಾಂತರ ವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.