ನೋಟ್ಸ್ ಕೊಡಲು ಬಂದ ಬಾಲಕಿ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್…

69
firstsuddi

ತುಮಕೂರು : ನೋಟ್ಸ್ ಕೊಡಲು ಬಂದ ಬಾಲಕಿ ಮೇಲೆ ಕಾಮುಕ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಅಸ್ಲಾಂ ಬಂಧಿತ ಆರೋಪಿ. ಕೊರಟಗೆರೆ ಪಟ್ಟಣದ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಗೆಳತಿಯ ಮನೆಗೆ ನೋಟ್ಸ್ ಕೊಡಲು ಬಂದಿದ್ದಳು. ಈ ವೇಳೆ ಈ ವೇಳೆ ಅಪ್ರಾಪ್ತ ಬಾಲಕಿ ಮೇಲೆ ಆರೋಪಿ ಎರಗಿದ್ದಾನೆ. ಕುಡಿಯುವ ನೀರಿಗೆ ಪ್ರಜ್ಞೆ ತಪ್ಪುವ ಔಷಧ ಬೇರಿಸಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ಆರೋಪಿ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗುತ್ತಿದೆ.

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಮುಂದಾಗಿದ್ದ ವೇಳೆ ಅಪ್ರಾಪ್ತೆ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ಅಸ್ಲಾಂನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.