ಪತಿ ಚಾಕೊಲೇಟ್ ತರಲಿಲ್ಲ ಎಂದು ಪತ್ನಿ ಆತ್ಮಹತ್ಯೆ !

64
firstsuddi

ಬೆಂಗಳೂರು: ಪತಿ ಚಾಕೊಲೇಟ್ ತರಲಿಲ್ಲ ಎಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿನಿ (30) ಆತ್ಮಹತ್ಯೆಗೆ ಶರಣಾದ ಮಹಿಳೆ. ಆರು ವರ್ಷದ ಹಿಂದೆ ಮದುವೆಯಾಗಿದ್ದ ಮೃತ ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ. ಈಕೆಯ ಪತಿ ಸಲೂನ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಬೆಳಗ್ಗೆ ಪತಿ ಕೆಲಸಕ್ಕೆ ಹೋಗುವಾಗ ಚಾಕೋಲೆಟ್ ತೆಗೆದುಕೊಂಡು ಬರುವಂತೆ ಪತ್ನಿ ಕೇಳಿದ್ದಳು. ಇತ್ತ ಕೆಲಸದಲ್ಲಿ ನಿರತನಾದ ಪತಿ ಮಧ್ಯಾಹ್ನವಾದರು ಚಾಕೊಲೇಟ್ ತಂದುಕೊಟ್ಟಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಎಂದಿನಂತೆ ಸಂಜೆ ಕೆಲಸ ಮುಗಿಸಿ ಹೊರಡುವಾಗ ಪತಿ ನಂದಿನಿಗೆ ಕರೆ ಮಾಡಿದ್ದಾರೆ. ಈ ವೇಳೆ ಪತ್ನಿ ಕರೆ ಸ್ವೀಕರಿಸಲಿಲ್ಲ. ಬಳಿಕ ಪತಿ ಮನೆಗೆ ಬಂದು ನೋಡಿದಾಗ ನಂದಿನಿ ನೇಣು ಹಾಕಿಕೊಂಡಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆಯಾದರೂ ಅಷ್ಟರಲ್ಲಾಗಲೇ ನಂದಿನಿ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.