ಪತ್ನಿ ಕೈ ಬೆರಳನ್ನೇ ಕಚ್ಚಿ ತಿಂದ ಪತಿ- ದೂರು ದಾಖಲು…

64
firstsuddi

ಬೆಂಗಳೂರು: ಗಂಡ-ಹೆಂಡತಿ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಎಡಗೈ ಬೆರಳನ್ನೇ ಕಚ್ಚಿ ತಿಂದಿರುವ ಘಟನೆ ನಗರದ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುಷ್ಪಾ (40) ಎಂಬ ಮಹಿಳೆ 23 ವರ್ಷಗಳ ಹಿಂದೆ ವಿಜಯಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲ ವರ್ಷಗಳಿಂದ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಈ ಹಿನ್ನಲೆ ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ತನ್ನ ಮಗನ ಜೊತೆಗೆ ಬೇರೆ ಮನೆ ಮಾಡಿ ವಾಸವಿದ್ದರು. ಆದರೂ ಕೂಡ ಆಕೆಗೆ ಗಂಡನ ಕಾಟದಿಂದ ಮುಕ್ತಿ ಸಿಕ್ಕಿರಲಿಲ್ಲ.

ಜುಲೈ 28ನೇ ತಾರೀಕು ಪತಿ ವಿಜಯಕುಮಾರ್, ಪತ್ನಿ ಇದ್ದ ಮನೆಗೆ ತೆರಳಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಎಡಗೈ ಬೆರಳನ್ನು ಪತಿ ಕಚ್ಚಿ ತಿಂದಿದ್ದು, ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ರೌಡಿಶೀಟರ್‌ಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.