ಪಾಕಿಸ್ತಾನದ ಐಎಸ್ ಐಗೆ ಭಾರತೀಯ ಸೇನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಬಟ್ಟೆ ವ್ಯಾಪಾರಿಯ ಬಂಧನ..

92
firstsuddi

ಬೆಂಗಳೂರು : ಪಾಕಿಸ್ತಾನದ ಐಎಸ್ ಐ ಅಧಿಕಾರಿಗಳಿಗೆ ಭಾರತೀಯ ಮಿಲಿಟರಿ ಸ್ಟೇಷನ್ನಿನ ಮಾಹಿತಿಗಳನ್ನು ರವಾನಿಸುತ್ತಿದ್ದ ಬಟ್ಟೆ ವ್ಯಾಪಾರಿಯನ್ನು ಬಂಧಿಸಲಾಗಿದೆ.

ಜಿತೇಂದರ್ ಸಿಂಗ್ ಬಂಧಿತ ಆರೋಪಿ. ನಗರದ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ. ಮೂಲತಃ ರಾಜಸ್ತಾನದ ಬಾರ್ಮೆರ್ ಮೂಲದವನಾದ ಜಿತೇಂದರ್ ಸಿಂಗ್ ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ.

ಯುವತಿ ಸೋಗಿನಲ್ಲಿದ್ದ ಐಎಸ್ ಐ ಅಧಿಕಾರಿ ನನಗೆ ಭಾರತವೆಂದರೆ ತುಂಬಾ ಇಷ್ಟ, ಭಾರತೀಯ ಸೇನಾ ನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಫೋಟೋಗಳಿದ್ದರೆ ಕಳುಹಿಸು ಎಂದಿದ್ದಾನೆ. ಇದಕ್ಕೆ ಸಮ್ಮತಿ ಸೂಚಿಸಿದ್ದ ಈತ, ಇದಕ್ಕಾಗಿ ಕಮಾಂಡರ್ ವೇಷ ಧರಿಸಿ ಸೇನಾನೆಲೆಗಳ ಬಳಿ ಹೋಗಿ ಫೋಟೋಗಳನ್ನು ಸೆರೆ ಹಿಡಿದು ವಾಟ್ಸಪ್ ಶೇರ್ ಮಾಡುತ್ತಿದ್ದ.

ಜಿತೇಂದ್ರ ಸಿಂಗ್ ಪಾಕಿಸ್ತಾನದ ಐಎಸ್ ಐ ಜೊತೆ ಸಂಪರ್ಕ ಕೂಡ ಹೊಂದಿದ್ದ ಎಂದು ತಿಳಿದುಬಂದಿದೆ. ಇಂದು ಮಿಲಿಟರಿ ಇಂಟಲಿಜೆನ್ಸ್ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಸಿಕ್ಕಿಬಿದ್ದಿದ್ದಾನೆ.