ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅರೆಸ್ಟ್…

66
firstsuddi

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಎನ್ನಲಾದ ದಿವ್ಯಾ ಹಾಗರಗಿ ಸೇರಿ ಐವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್ಐ ಅಕ್ರಮ ಪ್ರಕರಣ ಹೊರ ಬರುತ್ತಿದ್ದಂತೆ ದಿವ್ಯಾ ಮತ್ತು ಟೀಮ್ ತಲೆಮರೆಸಿಕೊಂಡಿತ್ತು. ಇದೀಗ 18 ದಿನಗಳ ನಂತರ ಸಿಐಡಿ ಬಲೆಗೆ ಬಿದ್ದಿದೆ.

ಇಂದು ಸಿಐಡಿ ಎಸ್‌ಪಿ. ರಾಘವೇಂದ್ರ ಹೆಗಡೆ, ಡಿವೈಎಸ್‍ಪಿ, ಪ್ರಕಾಶ್ ರಾಠೋಡ್, ಡಿವೈಎಸ್‍ಪಿ ಶಂಕರಗೌಡ ನೇತೃತ್ವದ ತಂಡ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ, ಮೇಲ್ವಿಚಾರಕರಾದ ಅರ್ಚನಾ, ಸುನೀತಾ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಉದ್ಯಮಿ ಸುರೇಶ, ಕಾಳಿದಾಸ ಐದು ಜನರನ್ನು ಪುಣೆಯಲ್ಲಿ ಬಂಧಿಸಿ, ಕಲಬುರಗಿ ಕಚೇರಿಗೆ ಕರೆ ತಂದಿದ್ದಾರೆ.