ಪ್ರಧಾನಿ ಮೋದಿ ಭೇಟಿಯಾದ ಭಗವಂತ್ ಮಾನ್.

58
firstsuddi

ನವದೆಹಲಿ : ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಭಗವಂತ್ ಮಾನ್, ರಾಷ್ಟ್ರೀಯ ಭದ್ರತೆ ನಿಭಾಯಿಸುವುದಕ್ಕೆ ನಮಗೆ ಕೇಂದ್ರದ ಬೆಂಬಲದ ಅಗತ್ಯವಿದೆ. ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ಹೇಳಿದ್ದೇನೆ. ಪಂಜಾಬ್ ನ ಆರ್ಥಿಕ ಸ್ಥಿತಿ ತಳಮಟ್ಟದಲ್ಲಿದ್ದು ಚಿಂತಾಜನಕವೆನಿಸಿದೆ. ಹೀಗಾಗಿ ಇಲ್ಲಿನ ಪರಿಸ್ಥಿತಿ ಸುಧಾರಿಸಲು ಮುಂದಿನ ಎರಡು ವರ್ಷಗಳವರೆಗೆ ಪ್ರತಿ ವರ್ಷ 50,000 ಸಾವಿರ ಕೋಟಿ ರೂ. ಪ್ಯಾಕೇಜ್ ಗೆ ಬೇಡಿಕೆ ಇಟ್ಟಿದ್ದೇನೆ. ಹಣ ಬಿಡುಗಡೆ ಮಾಡಿದರೆ ನಮ್ಮ ಆರ್ಥಿಕತೆ ಸ್ವಲ್ಪ ಚೇತರಿಕೆ ಕಾಣಬಹುದು ಎಂದು ಹೇಳಿದ್ದಾರೆ. ಇದರ ಜೊತೆಗೆ ಗಡಿ ಸಮಸ್ಯೆ, ಡ್ರಗ್ಸ್ ಸಾಗಾಣಿಕೆ ಸೇರಿದಂತೆ ಕೆಲ ಮಹತ್ವದ ವಿಷಯಗಳ ಕುರಿತಾಗಿಯೂ ಪ್ರಧಾನಿ ಹಾಗೂ ಕೇಂದ್ರ ಸಚಿವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.