ಪ್ರೀತಿಗೆ ಮನೆಯವರ ವಿರೋಧ- ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ…

252
firstsuddi

ಮಂಗಳೂರು: ಇಲ್ಲಿನ ಮಂಗಳೂರು ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೋಣೆಯಲ್ಲಿ ಭಾನುವಾರ  ಹೆಸರಾಂತ ಕಾಲೇಜಿನಲ್ಲಿ ಓದುತ್ತಿರುವ ಕಾಸರಗೋಡಿನ ಇಬ್ಬರು ವಿದ್ಯಾರ್ಥಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕೇರಳ ರಾಜ್ಯದ ಕಾಸರಗೋಡು ಮೂಲದ  ವಿದ್ಯಾರ್ಥಿಗಳಾದ ವಿಷ್ಣು (22) ಮತ್ತು ಗ್ರೀಷ್ಮಾ (21) ಎಂದು ಗುರುತಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕಾಸರಗೋಡು ಮೂಲದ  ವಿಷ್ಣು ಮತ್ತು ಗ್ರೀಷ್ಮಾ  ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.   ಇಬ್ಬರೂ ವಿಭಿನ್ನ ಜಾತಿಗಳಿಗೆ ಸೇರಿದವರಾಗಿದ್ದರಿಂದ ಕುಟುಂಬದವರ ಅವರ ಸಂಬಂಧವನ್ನು ವಿರೋಧಿಸಿದ್ದರು. ಅಕ್ಟೋಬರ್ 13 ರಂದು ವಿಷ್ಣು ಮತ್ತು ಗ್ರೀಷ್ಮಾ ಮಂಗಳೂರಿಗೆ ಬಂದು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಸಮೀಪವಿರುವ ಹೋಟೆಲ್‌ನಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡು ಇಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಂಡೇಶ್ವರ ಠಾಣಾ ಪೊಲೀಸರು ಮೃತದೇಹಗಳನ್ನು ಶವಾಗಾರಕ್ಕೆ ಸಾಗಿಸಿದ್ದು ತನಿಖೆ ನಡೆಯುತ್ತಿದೆ.