ನವದೆಹಲಿ : ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಭಾರತದಲ್ಲಿ ಚೀನಾದ 59 ಆ್ಯಪ್‍ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಭಾರತೀಯ ಸೇನೆಗೆ ವಿಶೆಷ ಸೂಚನೆಯನ್ನು ನೀಡಲಾಗಿದ್ದು, ಸೇನೆಯ ಯೋಧರು ಹಾಗೂ ಅಧಿಕಾರಿಗಳಿಗೆ 89 ವಿದೇಶಿ ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಭಾರತೀಯ ಸೇನೆಯ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುವುದನ್ನು ತಡೆಯುವ ಸಲುವಾಗಿ ಭಾರತೀಯ ಸೇನೆಯ 13 ಲಕ್ಷ ಯೋಧರು, ಅಧಿಕಾರಿಗಳಿಗೆ ತಮ್ಮ ಮೊಬೈಲ್‍ನಲ್ಲಿರುವ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಸೇರಿದಂತೆ 89 ವಿದೇಶಿ ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಸೇನೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಒಂದು ವೇಳೆ ಈ ಸೂಚನೆಯನ್ನು ಪಾಲಿಸದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.










