ರಾಂಚಿ: ಹಣೆಗೆ ಬಿಂದಿ ಇಟ್ಟು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕಿಯೊಬ್ಬರು ಥಳಿಸಿದ್ದು, ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನಡೆದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ತನಿಖೆಗೆ ಆದೇಶಿಸಿದೆ. ಇತ್ತ ಸಮಿತಿಯನ್ನು ಧನಾಬಾದ್‌ಗೆ ಕಳುಹಿಸಿಕೊಟ್ಟಿದೆ. ಇತ್ತ ಜಾರ್ಖಂಡ್ ಮಕ್ಕಳ ಕಲ್ಯಾಣ ಸಮಿತಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶಿಕ್ಷಕಿಯನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಶಾಲೆಗೆ ಸಿಬಿಎಸ್ಇ ಬೋರ್ಡ್ ಎಂದು ಮಕ್ಕಳಿಗೆ ಪಾಠ ಕಲಿಸುತ್ತಿದೆ. ಆದರೆ ಸಿಬಿಎಸ್ಇ ಅಧಿಕೃತ ಪರವಾನಗೆ ಇಲ್ಲ ಅನ್ನೋದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಟ್ವೀಟ್ ಮಾಡಿರುವ ಜಾರ್ಖಂಡ್‌ನ ಧನ್‌ಬಾದ್ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಉತ್ತಮ್ ಮುಖರ್ಜಿ ಅವರು, ಇದು ಗಂಭೀರ ವಿಷಯವಾಗಿದ್ದು, ಶಾಲೆಯು ಸಿಬಿಎಸ್ಇ ಮಂಡಳಿಗೆ ಸಂಯೋಜಿತವಾಗಿಲ್ಲ. ನಾನು ಜಿಲ್ಲಾ ಶಿಕ್ಷಣ ಅಧಿಕಾರಿಗೆ ಈ ಬಗ್ಗೆ ತಿಳಿಸಿದ್ದು, ಮೃತ ವಿದ್ಯಾರ್ಥಿನಿಯ ಕುಟುಂಬವನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ.










