ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಎರಡೂವರೆ ವರ್ಷದ ಕಂದಮ್ಮ ಬಲಿಯಾದ ಘಟನೆ ನಗರದ ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಪೈಪ್‌ಲೈನ್‌ನಲ್ಲಿ ನಡೆದಿದೆ.
ಎರಡೂವರೆ ವರ್ಷದ ಕಾರ್ತಿಕ್ ಮೃತ ಬಾಲಕ. ಕಾರ್ತಿಕ್ ಉತ್ತರ ಪ್ರದೇಶ ಮೂಲದ ಹನುಮಾನ್ ದಂಪತಿಯ ಪುತ್ರನಾಗಿದ್ದು, ಕೂಲಿ ಕೆಲಸಕ್ಕಾಗಿ ಕುಟುಂಬ ಸಹಿತ ಬೆಂಗಳೂರಿಗೆ ಬಂದಿದ್ದರು. ಕೆಲಸದ ನಿಮಿತ್ತ ಹನುಮಾನ್ ಮನೆಯಿಂದ ಹೊರ ಹೋಗಿದ್ದಾಗ ಪತ್ನಿ ಹಂಸ ಹಾಗೂ ಮಗು ಕಾರ್ತಿಕ್ ಮನೆಯಲ್ಲಿದ್ದರು. ಈ ವೇಳೆ ಆಟವಾಡಲು ಮನೆಯಿಂದ ಹೊರಬಂದ ಮಗು ಬಿಡಬ್ಲ್ಯುಎಸ್‌ಎಸ್‌ಬಿಯ ಕಾಮಗಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಘಟನೆ ಸಂಬಂಧ ಬಿಡಬ್ಲ್ಯುಎಸ್‌ಎಸ್‌ಬಿ ಇಂಜಿನಿಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.










