ಬುದ್ದಿ ಹೇಳಿದ ಉಪನ್ಯಾಸಕರಿಗೆ ಲಾಂಗ್ ಹಿಡಿದು ಬೆದರಿಕೆ ಹಾಕಿದ ವಿದ್ಯಾರ್ಥಿ…

104
firstsuddi

ಮಂಡ್ಯ: ತರಗತಿಗೆ ಸರಿಯಾಗಿ ಹಾಜರಾಗದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ತನಗೆ ಬುದ್ದಿ ಹೇಳಿದ ಉಪನ್ಯಾಸಕರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಜೊತೆಗೆ, ಪಾಠವನ್ನು ಸಹ ಸಮರ್ಪಕವಾಗಿ ಕಲಿಯುತ್ತಿರಲಿಲ್ಲ. ಈ ಬಗ್ಗೆ ಉಪನ್ಯಾಸಕರೊಬ್ಬರು ತಿಳುವಳಿಕೆ ಹೇಳುವಂತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಮರು ದಿನ ಬೈಕ್‌ನಲ್ಲಿ ಉಪನ್ಯಾಸಕರಿದ್ದ ಕೊಠಡಿಗೆ ಮಾಸ್ಕ್ ಧರಿಸಿಕೊಂಡು ಆಗಮಿಸಿ ಲಾಂಗ್ ಹಿಡಿದು ನನ್ನ ವಿಚಾರಕ್ಕೆ ಬಂದರೇ ತಕ್ಕ ಪಾಠ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕುತ್ತಿರುವ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸಹ ಉಪನ್ಯಾಸಕರು ಸ್ಥಳೀಯ ಪೊಲೀಸರಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದರು, ತಕ್ಷಣವೇ ಕಾಲೇಜಿಗೆ ಆಗಮಿಸಿದ ಪೊಲೀಸರು ಆತನ ಕೈಯಲ್ಲಿದ್ದ ಲಾಂಗ್ ಮತ್ತು ಆತನ ಬೈಕ್‌ನ್ನು, ಆತನನ್ನೂ ವಶಕ್ಕೆ ಪಡೆದು ಅವರ ತಂದೆ ತಾಯಿಗಳಿಗೆ ವಿಚಾರ ಮುಟ್ಟಿಸಿದರು.

ತದನಂತರ ಆತನಿಗೆ ಪೋಷಕರು ಮತ್ತು ಪೊಲೀಸರೆದುರು ಬುದ್ಧಿ ಮಾತು ಹೇಳಿ ಠಾಣೆಯಿಂದ ಕಳುಸಿಕೊಡಲಾಗಿದೆ. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.