ಬೆಂಗಳೂರಿಗೆ ಮೊದಲ ಬಾರಿಗೆ 120 ಟನ್ ಆಕ್ಸಿಜನ್ ಹೊತ್ತು ಬಂದ ವಿಶೇಷ ರೈಲು..!

125
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿದ್ದು, ಅನೇಕ ದೇಶಗಳು ನೆರವಿಗೆ ಬಂದಿವೆ. ಇದೀಗ ಮೊದಲ ಬಾರಿಗೆ ಎಕ್ಸ್ ಪ್ರೆಸ್ ರೈಲಿನ ಮೂಲಕ ಜೆಮ್ ಶೆಡ್ ಪುರದಿಂದ ನಗರಕ್ಕೆ 6 ಆಕ್ಸಿಜನ್ ಕಂಟೇನರ್ ಗಳು ಬಂದು ತಲುಪಿವೆ. ಪ್ರತಿ ಕಂಟೇನರ್ 20 ಟನ್ ಸಾಮರ್ಥ್ಯ ಹೊಂದಿದ್ದು, ಒಟ್ಟು 120 ಟನ್ ಲಿಕ್ವಿಡ್ ಆಕ್ಸಿಜನ್ ಹೊತ್ತುಕೊಂಡು ಬಂದಿದ್ದ ರೈಲು ಇಂದು ಬೆಳಗ್ಗೆ 9.30ಕ್ಕೆ ವೈಟ್ ಫೀಲ್ಡ್ ನಲ್ಲಿರುವ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾ ಡಿಪೋವನ್ನು ತಲುಪಿದೆ. ನಿನ್ನೆ ಮುಂಜಾನೆ 3.30ಕ್ಕೆ ಜೆಮ್ ಶೆಡ್ ಪುರದ ತತಾನಗರ ನಿಲ್ದಾಣದಿಂದ ಹೊರಟಿದ್ದ ರೈಲು ಸುಮಾರು 30 ಗಂಟೆಗಳ ಕಾಲ ಕ್ರಮಿಸಿ ನಗರ ತಲುಪಿದೆ. ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.

ಇನ್ನೂ ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು, ಕೋವಿಡ್ 19 ಸೋಂಕಿತರಿಗೆ ಸಹಾಯವಾಗಲೆಂದು ಗುಜರಾತ್ ನ ಟಾಟಾನಗರದಿಂದ 6 ಕಂಟೈನರ್ ಗಳ ಆಕ್ಸಿಜನ್ ಎಕ್ಸ್ ಪ್ರೆಸ್ ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ತಲುಪಿದೆ ಎಂದು ಟ್ವೀಟ್ ಮಾಡಿದ್ದಾರೆ.