ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ – ಡಿ.1ರಿಂದಲೇ ಹೊಸ ದರ ಜಾರಿ…

85
firstsuddi

ಬೆಂಗಳೂರು : ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದ್ದು, ಡಿಸೆಂಬರ್ 1 ರಿಂದಲೇ ಹೊಸ ದರ ಅನ್ವಯವಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿದೆ.

ಎರಡು ಕಿಲೋ ಮೀಟರ್ ಗೆ 25 ರೂಪಾಯಿ ಇದ್ದ ಆಟೋ ದರವನ್ನು ಇದೀಗ 30 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಪ್ರತಿ ಕಿಲೋಮೀಟರ್ ಗೆ ಆಟೋ ದರ 12.50 ರೂಪಾಯಿ ಇತ್ತು. ಆದರೆ ಇನ್ನೂ ಮುಂದೆ ಆಟೋ ದರವನ್ನು 15 ರೂಪಾಯಿ ಏರಿಸಲಾಗಿದೆ. ಅಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಟೋರಿಕ್ಷಾಗಳಿಗೂ ಇದೇ ದರ ಅನ್ವಯವಾಗುತ್ತದೆ. 20 ಕೆಜಿ ಮೇಲ್ಪಟ್ಟ ಲಗೇಜ್ ಗೆ 5 ರೂಪಾಯಿ ನಿಗದಿಪಡಿಸಲಾಗಿದ್ದು, 50 ಕೆಜಿವರೆಗೆ ಮಾತ್ರ ಆಟೋದಲ್ಲಿ ಲಗೇಜ್ ಸಾಗಿಸಲು ಅವಕಾಶವಿರುತ್ತದೆ

ರಾತ್ರಿ ವೇಳೆ ಅಂದರೆ ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆವರೆಗೆ ಆಟೋ ಅರ್ಧಪಟ್ಟು ಹೆಚ್ಚು ಹಣ ನೀಡಬೇಕು. ಪರಿಷ್ಕೃತ ದರ ಹೆಚ್ಚಳದ ಕುರಿತು ಮೀಟರ್ ನಲ್ಲಿ ಪ್ರದರ್ಶಿಸಬೇಕು ಮತ್ತು ಆಟೋ ಮೀಟರ್ ಗಳ ದರಪರಿಷ್ಕರಣೆಗೆ 90 ದಿನ ಅವಕಾಶ ಇರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.