ಬೆಂಗಳೂರು : ನಗರದ ತುರಹಳ್ಳಿ ಫಾರೆಸ್ಟ್ ನ ಸುತ್ತಮುತ್ತ ಸೇರಿದಂತೆ ನಾಲ್ಕು ಕಡೆ ಚಿರತೆ ಪತ್ತೆಯಾಗಿರೋದು ಭೀತಿ ಹೆಚ್ಚಿಸಿದ್ದು, ಯಾರೂ ಕೂಡ ರಾತ್ರಿ ಹೊತ್ತು ಒಂಟಿಯಾಗಿ ಹೊರಗಡೆ ಓಡಾಡಬೇಡಿ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದ ಹೊರವಲಯ ಇತ್ತೀಚೆಗೆ ಚಿರತೆಗಳ ಅವಾಸ ಸ್ಥಾನವಾಗಿದೆ. ಚಿರತೆ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ. ಚಿರತೆ ಓಡಾಟದ ಭಾಗ ಹಾಗೂ ಕಾಡಿನ ಆಸುಪಾಸುಗಳಲ್ಲಿ ಅನಗತ್ಯ ಓಡಾಟ ಬೇಡ. ಒಂಟಿಯಾಗಿ ರಾತ್ರಿ ಹೊತ್ತು ಓಡಾಟವನ್ನು ನಿಲ್ಲಿಸಿದರೆ ಒಳ್ಳೆಯದು. ಸಾಧ್ಯವಾದಷ್ಟು ಗುಂಪಿನಲ್ಲಿ ಹೋಗಬೇಕು. ಮಕ್ಕಳು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.










