ಬೆಂಗಳೂರು : ಟ್ರಾಫಿಕ್ ಜಾಮ್‍ನಿಂದ ಬೇಸತ್ತು ಕಾರಿನಿಂದ ಇಳಿದು ಮೆಟ್ರೋ ಹತ್ತಿದ ಮದುಮಗಳು…

134
firstsuddi

ಬೆಂಗಳೂರು : ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದ ಮದುಮಗಳೊಬ್ಬಳು ಮುಹೂರ್ತ ಮೀರುವ ಭಯದಲ್ಲಿ ಕಾರಿನಿಂದ ಇಳಿದು ಮೆಟ್ರೋ ಹತ್ತಿದ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಆಭರಣಗಳ ಸಹಿತ ಮದುವೆಗೆ ಮೇಕಪ್ ಮಾಡಿಕೊಂಡಿದ್ದ ವಧುವು ಕಾರಿನಲ್ಲಿ ಮದುವೆ ಮಂಟಪದತ್ತ ಹೊರಟಿದ್ದರು. ಆದರೆ, ಬೆಂಗಳೂರಿನ ಟ್ರಾಫಿಕ್ ನಿಂದಾಗಿ ನಿಧಾನವಾಗಿ ಕಾರು ಮೂವ್ ಆಗುತ್ತಿತ್ತು. ಅತ್ತ ಮದುವೆ ಮನೆಯಲ್ಲಿ ಪೋಷಕರಿಗೆ ಟೆನ್ಶನ್ ಶುರುವಾಗಿದೆ. ಹೊತ್ತು ಮೀರುತ್ತಿದೆ, ಇನ್ನೂ ಎಲ್ಲಿದ್ದೀಯಾ, ಬೇಗ ಬಾ ಎಂಬ ಕರೆ ಬರುತ್ತಲೇ ಇತ್ತು. ಇತ್ತ ವಧುವಿಗೂ ಅದೇ ಟೆನ್ಶನ್ ಮುಹೂರ್ತ ವೀರಿದರೆ ಕಥೆ ಏನು? ಎಂಬ ಚಿಂತೆ. ಹೀಗಾಗಿ ವಧು ಕೂಡಲೇ ಕಾರಿನಿಂದ ಇಳಿಯುವ ಯೋಚನೆ ಮಾಡಿದರು. ಅಲ್ಲೇ ಇದ್ದ ಮೆಟ್ರೋ ಸ್ಟೇಶನ್ ಬಳಿಗೆ ಓಡಿದರು. ಮೆಟ್ರೋ ಟಿಕೆಟ್ ಪಡೆದು ಕೊನೆಗೆ ನಿರಾಳವಾಗಿ ಕಲ್ಯಾಣ ಮಂಟಪವನ್ನು ತಲುಪಿದರು.

ಎಲ್ಲ ದೃಶ್ಯಗಳನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ನೂರಾರು ಕಮೆಂಟ್ ಗಳು ಬಂದಿದ್ದು, ‘ಒಂದು ವೇಳೆ ಟ್ರಾಫಿಕ್ ಕ್ಲಿಯರ್ ಆಗುವುದೆಂದು ಕಾರಿನಲ್ಲಿ ಕುಳಿತಿದ್ದರೆ ಮದುವೆ ಮುಹೂರ್ತವೇ ಮುಗಿದು ಹೋಗುತ್ತಿತ್ತು’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬೆಂಗಳೂರು ಟ್ರಾಫಿಕ್ ಯಾವೆಲ್ಲ ರೀತಿಯಲ್ಲಿ ತೊಂದರೆಯನ್ನುಂಟು ಮಾಡುತ್ತದೆ ಎಂಬುದಕ್ಕೆ ಸಾಕ್ಷಿ ಎಂದೂ ಸಹ ಚರ್ಚೆಗಳು ಶುರುವಾಗಿವೆ.