ಬೇರೆ ದೇಶದವರು ನಮ್ಮ ಮೇಲೆ ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್ ಸಂದೇಶ.

48

ವಾಷಿಂಗ್ಟನ್: ಭಾರತ ನಮ್ಮ ಮೇಲೆ ತೆರಿಗೆ ವಿಧಿಸಿದರೆ ನಾವು ಅವರ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ವಿಧಿಸುತ್ತೇವೆ ಎಂಬ ಸಂದೇಶವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ತಮ್ಮ ಫ್ಲೋರಿಡಾ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಂದರ್ಭಗಳಲ್ಲಿ ಅವರು ನಮ್ಮ ಮೇಲೆ ತೆರಿಗೆ ವಿಧಿಸುತ್ತಾರೆ. ನಾವು ಅವರಿಗೆ ತೆರಿಗೆ ವಿಧಿಸುತ್ತಿಲ್ಲ. ಆದರೆ ಇನ್ನು ಮುಂದೆ ನಾವು ತೆರಿಗೆ ವಿಧಿಸುತ್ತೇವೆ ಎಂದು ತಿಳಿಸಿದರು. ಚೀನಾದೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಅವರು ಈ ಹೇಳಿಕೆಗಳನ್ನು ನೀಡಿದರು. ಅಮೆರಿಕ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವ ಕೆಲ ದೇಶಗಳಲ್ಲಿ ಭಾರತ ಮತ್ತು ಬ್ರೆಜಿಲ್ ಸೇರಿವೆ ಎಂದು ಟ್ರಂಪ್ ಹೇಳಿದರು. ನಮಗೆ ಅಲ್ಲಿಂದ ಮೋಟಾರ್ ಸೈಕಲ್ ಬರುತ್ತೆ ನಾವು ಮೋಟಾರ್ ಸೈಕಲ್ ಕಳುಹಿಸುತ್ತೇವೆ. ಅವರು ನಮ್ಮ ಉತ್ಪನ್ನದ ಮೇಲೆ 100% ಮತ್ತು 200% ಶುಲ್ಕ ವಿಧಿಸುತ್ತಾರೆ. ಬ್ರೆಜಿಲ್ ಸಹ ಈದೇ ರೀತಿ ತೆರಿಗೆ ಹಾಕುತ್ತದೆ. ಅವರು ನಮಗೆ ಶುಲ್ಕ ವಿಧಿಸಿದರೆ ನಾವು ಅಷ್ಟೇ ಪ್ರಮಾಣದ ಶುಲ್ಕವನ್ನು ವಿಧಿಸುತ್ತೇವೆ ಎಂದು ತಿಳಿಸಿದರು.