ಬೆಂಗಳೂರು : ಭವಾನಿ ರೇವಣ್ಣ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ತಮಾಷೆಗೆ. ಹಾಗಂತ ಅದನ್ನು ಗಂಭೀರವಾಗಿ ತೆಗೆದುಕೊಂಡು ಟಿಕೆಟ್ ಕೊಡಿ ಅಂತಾ ಬರಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸ್ಪಷ್ಟಪಡಿಸಿದ್ದಾರೆ.
ನನ್ನ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಭವಾನಿಯವರಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ಕೂಡ ನಡೆದಿಲ್ಲ. ನಾನು ಜೆಡಿಎಸ್ ಹೈಕಮಾಂಡ್ ಅಲ್ಲ, ಅವರ ಮನೆಯಲ್ಲಿಯೇ ಅವರ ಹೈಕಮಾಂಡ್ ಇದ್ದಾರೆ. ಕುಮಾರಸ್ವಾಮಿ ಬೇಕಾದರೆ ಇದು ಮನೆ ಜಗಳ ಎಂದು ಹೇಳಬಹುದು. ನಾನು ಹಾಗೆ ಹೇಳಕ್ಕಾಗಲ್ಲ ಎಂದರು.
ಪ್ರೀತಂ ಗೌಡ ವಿರುದ್ಧ ಯಾರೇ ಸ್ಪರ್ಧಿಸಿದರೂ ಪ್ರೀತಂ ಗೆಲುವು ನಿಶ್ಚಿತ. ಹಾಸನದಲ್ಲಿ ಪ್ರೀತಂ ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರೀತಂ ಜನಪ್ರಿಯತೆ ಇತ್ತೀಚೆಗೆ ಹೆಚ್ಚಾಗಿದೆ. ಜನರ ಬೆಂಬಲ ಪ್ರೀತಂ ಪರ ಇದೆ. ಭವಾನಿ ಅಕ್ಕ ಅವರಿಗೆ ಹಾಸನ ಕ್ಷೇತ್ರ ಸುರಕ್ಷಿತವಲ್ಲ ಎಂದು ತಿಳಿಸಿದ್ದಾರೆ.










