ಭಾರತದಲ್ಲಿ ಎಕ್ಸ್‌ಇ ಕೋವಿಡ್‌ ರೂಪಾಂತರಿ ಪತ್ತೆಗೆ ಯಾವುದೇ ಪುರಾವೆಗಳಿಲ್ಲ : ಕೇಂದ್ರ ಸರ್ಕಾರ.

83
firstsuddi

ಮುಂಬೈ : ನಗರದಲ್ಲಿ ಕೊರೊನಾ ಹೊಸ ರೂಪಾಂತರಿ ಎಕ್ಸ್ಇ ತಳಿ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ವರದಿ ಮಾಡಿತ್ತು. ಇದೀಗ ಈ ರೂಪಾಂತರಿ ವೈರಸ್ ಪತ್ತೆಗೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

ಭಾರತದ ಸಾರ್ಸ್ ಕೋವ್-2 ಜೆನೆಟಿಕ್ಸ್ ಕಾನ್ಸೊರ್ಟಿಯಮ್ ನ (INSACOG) ಜಿನೋಮ್ ಸೀಕ್ವೆನ್ಸಿಂಗ್ ತಜ್ಞರು ವಿವರವಾಗಿ ಪರಿಶೀಲನೆ ನಡೆಸಿದ್ದು, ಮಾದರಿಯಲ್ಲಿ ಪತ್ತೆಯಾಗಿರುವ ತಳಿಯ ಜಿನೋಮ್ ರಚನೆಗಳಿಗೂ ಎಕ್ಸ್ ಇ ತಳಿಯ ರಚನೆಗಳೂ ಹೋಲಿಕೆಯಾಗಿಲ್ಲ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಎಕ್ಸ್‌ಇ ರೂಪಾಂತರಿ ಬಗ್ಗೆ ಮಾತನಾಡಿದ ಕೊವಿಡ್ -19 ಕಾರ್ಯಪಡೆಯ ಸದಸ್ಯ ಡಾ ಶಶಾಂಕ್ ಜೋಶಿ ಭಯಪಡುವ ಅಗತ್ಯವಿಲ್ಲ. ಇದು ಒಮಿಕ್ರಾನ್ ನ ರೂಪಾಂತರವಾಗಿರುವುದರಿಂದ, ಇದು ಶ್ವಾಸಕೋಶವನ್ನು ಬಾಧಿಸುವುದಿಲ್ಲ. ಎಕ್ಸ್‍ಇ ರೂಪಾಂತರವು ತೀವ್ರವಾದ ಸೋಂಕನ್ನು ಉಂಟುಮಾಡುವುದಿಲ್ಲ ಎಂದು ನಂಬಲಾಗಿದೆ. ಆದರೆ ವಿಶೇಷವಾಗಿ ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಬಳಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.