ಭೀಕರ ರಸ್ತೆ ಅಪಘಾತ – ಮೂರು ತಿಂಗಳ ಮಗು ಸೇರಿ ಮೂವರು ಸಾವು…

66
firstsuddi

ಚಿತ್ರದುರ್ಗ: ಫಾರ್ಚುನರ್ ಕಾರು ಮತ್ತು ಲಾರಿ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಮೂರು ತಿಂಗಳ ಮಗು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಜಿಲ್ಲೆಯ ವಿಜಯಪುರದ ಗೊಲ್ಲರಹಟ್ಟಿ ಗ್ರಾಮದ ಬಳಿ ನಡೆದಿದೆ.

ಮೂರು ತಿಂಗಳ ಮಗು ಫಾತಿಮಾ, ತಾಯಿ ತಬ್ಸೂಮ್ ಹಾಗೂ ಸಂಬಂಧಿ ಜಾಕೀರ್ ಅಹ್ಮದ್ ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಹೆಚ್ಎಸ್ಆರ್ ಬಡಾವಣೆ ನಿವಾಸಿಗಳು ಎಂದು ತಿಳಿದು ಬಂದಿದೆ. ನಯಾಜ್, ಇಮ್ರಾನ್ ಖಾನ್, ಶೋಯೇಬ್ ಅಹಮ್ಮದ್, ತಬ್ರೀಜ್ ಅಹಮ್ಮದ್ ಹಾಗೂ ಸಬಾ ಇವರುಗಳಿಗೆ ತೀವ್ರ ಗಾಯಾಳುಗಳಾಗಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರೆಲ್ಲಾ ಗೋವಾದಿಂದ ಬೆಂಗಳೂರಿಗೆ ಹಿಂದಿರುಗುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಲಾರಿಗೆ ಅಪ್ಪಳಿಸಿದ್ದು, ಸ್ಥಳದಲ್ಲೇ ಮೂವರು ಕೊನೆಯುಸಿರೆಳೆದ್ದಾರೆ.

ಘಟನೆ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.