ಭೂ ಅಕ್ರಮಗಳ ಬಗ್ಗೆ ತನಿಖೆ ಮಾಡಿ ; ಪ್ರಾದೇಶಿಕ ಆಯುಕ್ತರಿಗೆ ರೋಹಿಣಿ ಸಿಂಧೂರಿ ಪತ್ರ…

83
firstsuddi

ಮೈಸೂರು : ಜಿಲ್ಲೆಯಲ್ಲಿ ನಡೆದಿರೋ ಭೂ ಅಕ್ರಮಗಳ ಸಮಗ್ರ ತನಿಖೆಗೆ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಜೂನ್ 11 ರಂದು ಪ್ರಾದೇಶಿಕ ಆಯುಕ್ತ ಡಾ. ಜಿ. ಸಿ. ಪ್ರಕಾಶ್ ಅವರಿಗೆ ಪತ್ರ ಬರೆದಿದ್ದಾರೆ.

ಸೈಟ್ ನಂ. 123 ದಟ್ಟಗಳ್ಳಿ ಮೈಸೂರು ತಾಲ್ಲೂಕಿನಲ್ಲಿರುವ ಸಾ.ರಾ.ಮಹೇಶ್ ಕಲ್ಯಾಣ ಮಂಟಪವು ನಿರ್ಮಾಣವಾಗಿರುವುದು ಸರ್ಕಾರಿ ಗೋಮಾಳದ ಭೂಮಿಯಲ್ಲಿ. ಭೂ ಮಂಜೂರಾತಿಯ ಸರಿಯಾದ ದಾಖಲೆಗಳು ಲಭ್ಯವಿಲ್ಲ. ಲಿಂಗಾಬುದಿ ಕೆರೆಯ ಬಳಿಯ ಸರ್ವೆ ನಂಬರ್ ನಲ್ಲಿ ಶಾಸಕ ಸಾ.ರಾ.ಮಹೇಶ್, ಮುಡಾ ಅಧ್ಯಕ್ಷ ರಾಜೀವ್ ಅವರು ಪಾಲುದಾರಿಕೆಯಲ್ಲಿ ನಿಯಮ ಉಲ್ಲಂಘಿಸಿ ರೆಸಾರ್ಟ್ ಮಾಡಲು ಮುಂದಾಗಿದ್ದಾರೆ. ಇದರ ಬಗ್ಗೆ ತಾರ್ಕಿಕ ತನಿಖೆ ನಡೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ ಮುಡಾ ಅಧ್ಯಕ್ಷ ಎಚ್.ಎ.ರಾಜೀವ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನೂರಾರು ಎಕ್ಕರೆ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ. ಜೊತೆಗೆ ಪ್ರಭಾವಿ ವ್ಯಕ್ತಿಗಳಿಂದ ಭೂ ಕಬಳಿಕೆಯು ನಡೆದಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.