ಮಂಗಳೂರು : ಮೀನುಗಾರನೋರ್ವನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಶಿಕ್ಷೆ ನೀಡಿದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ವೈಲ್ ಶೀನು ಎಂಬುವವನು ಮಂಗಳೂರಿನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಮೀನುಗಾರರೊಬ್ಬರ ಮೊಬೈಲ್ ಕಳೆದು ಹೋಗಿತ್ತು. ಇದನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಬೋಟ್ ನಲ್ಲೇ ಆತನ ಕಾಲಿಗೆ ಹಗ್ಗಕಟ್ಟಿ ತಲೆಕೆಳಗು ಮಾಡಿ ನೇತುಹಾಕಿ ಅಮಾನವೀಯವಾಗಿ ವಿಚಾರಿಸಿದ್ದಾರೆ. ಜೊತೆಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಘಟನೆ ನಡೆದು ಕೆಲವು ದಿನಗಳಾಗಿದ್ದು, ಇದರ ವಿಡಿಯೋ ಇದೀಗ ಪೊಲೀಸರಿಗೆ ಲಭಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










