ಮಂಗಳೂರು: ನಗರದೊಳಗೆ ಕಾಡುಕೋಣ ಪ್ರತ್ಯಕ್ಷ; ಭಯಭೀತರಾದ ಸ್ಥಳೀಯರು…!

190

ಮಂಗಳೂರು : ನಗರದೊಳಗೆ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಭಯಭೀತರಾದ ಘಟನೆ ಇಂದು ಮುಂಜಾನೆ ವೇಳೆಗೆ ನಗರದ ಹ್ಯಾಟ್ ಹಿಲ್ ಬಳಿ ನಡೆದಿದೆ. ಏಕಾಏಕಿ ನಗರದೊಳಗೆ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಜನದರು ಭಯಭೀತರಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆಯ ತಂಡ ಕಾಡುಕೋಣ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಒಂಟಿ ಕಾಡುಕೋಣ ಅಪಾಯಕಾರಿಯಾಗಿದ್ದು, ಸುಮಾರು 40 ದಿನಗಳಿಂದ ಲಾಕ್ ಡೌನ್ ಅಗಿರುವ ಕಾರಣ ಜನ, ಸಂಚಾರವಿಲ್ಲದೆ ಕಾಡುಕೋಣ ನಗರದೊಳಗೆ ಪ್ರವೇಶ ಮಾಡಿರಬಹುದು ಎಂದು ಹೇಳಲಾಗುತ್ತಿದೆ.