ಮಂಗಳೂರು: ಅನಿಲ ತುಂಬಿದ ಟ್ಯಾಂಕರ್ ಮಗುಚಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ 2ನೇ ತಿರುವಿನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 73 ರ ಹಾಸನ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಶಿರಾಡಿ ಘಾಟ್ ನ ಕೆಂಪುಹೊಳೆ ಎಂಬಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ತುಂಬಿಸಿಕೊಂಡು ತೆರಳುತ್ತಿದ್ದ ಅನಿಲ ಟ್ಯಾಂಕರ್ ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದು ಅನಿಲ ಸೋರಿಕೆಯಾಗುತ್ತಿರುವುದರಿಂದ ಸಂಚಾರ ವ್ಯತ್ಯಯವುಂಟಾಗಿದೆ.
ಆದ್ದರಿಂದ ರಾಷ್ಡ್ರೀಯ ಹೆದ್ದಾರಿ 73 ರ ಶಿರಾಡಿ ಮಾರ್ಗವನ್ನು ಗುಂಡ್ಯ ಎಂಬಲ್ಲಿ ನಿರ್ಭಂದಿಸಿದ್ದು ಸದರಿ ಮಾರ್ಗವಾಗಿ ತೆರಳುವ ವಾಹನ ಸಂಚಾರರು ಬೆಳ್ತಂಗಡಿ-ಚಾರ್ಮಾಡಿ, ಅಥವಾ ಸಂಪಾಜೆ-ಮಡಿಕೇರಿ ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.










