ಮಗನ ಫ್ಯಾಕ್ಟರಿಗೆ ಭೇಟಿ ನೀಡಿ ಆಯುಧ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ.

83
firstsuddi

ಬೆಂಗಳೂರು/ದೊಡ್ಡಬಳ್ಳಾಪುರ : ಆಯುಧ ಪೂಜೆ ಹಿನ್ನಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮಗನ ಫ್ಯಾಕ್ಟರಿಯಲ್ಲಿ ಆಯುಧಪೂಜೆ ನೆರವೇರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮಗ ಭರತ್ ಉಸ್ತುವಾರಿಯ ಮ್ಯಾಗ್ನಾಟಿಕ್ ಹಾಗೂ ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿಗೆ ಪತ್ನಿ ಚೆನ್ನಮ್ಮ ಜೊತೆ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ಕಾರ್ಮಿಕರಿಗೆ ವಿಜಯದಶಮಿ ಶುಭಾಶಯ ತಿಳಿಸಿ ಉಡುಗೊರೆ ಹಾಗೂ ಸಿಹಿಯನ್ನು ಹಂಚಿದರು.

ಈ ವೇಳೆ ಜಿಲ್ಲಾಧಿಕಾರಿ ಶ್ರೀನಿವಾಸ್, ಡಿವೈಎಸ್ಪಿ ರಂಗಪ್ಪ, ಇನ್ಸ್ ಪೆಕ್ಟರ್ ಗಳಾದ ಸತೀಶ್ಕುಮಾರ್, ನವೀನ್ಕುಮಾರ್ ಎಂ.ಬಿ., ಪಿಎಸ್ಐ ಭವಿತಾ ಉಪಸ್ಥಿತರಿದ್ದರು.